ನ್ಯಾಮತಿ: ಮೊದಲ ಬೇಸಾಯ ಶುರು, ಜಮೀನಿನಲ್ಲಿ ಪೂಜೆ

ಶುಕ್ರವಾರ, ಏಪ್ರಿಲ್ 19, 2019
22 °C

ನ್ಯಾಮತಿ: ಮೊದಲ ಬೇಸಾಯ ಶುರು, ಜಮೀನಿನಲ್ಲಿ ಪೂಜೆ

Published:
Updated:
Prajavani

ನ್ಯಾಮತಿ: ಯುಗಾದಿ ವಿಕಾರಿನಾಮ ಸಂವತ್ಸರದ ವರ್ಷದಲ್ಲಿ ಮೊದಲ ಬೇಸಾಯವನ್ನು ಮಲ್ಲಿಗೇನಹಳ್ಳಿ ರೈತರು ಬುಧವಾರ ಸಾಮೂಹಿಕವಾಗಿ ದೇವರ ಜಮೀನಿನಲ್ಲಿ ಪೂಜೆ ನೆರವೇರಿಸಿ ಆರಂಭಿಸಿದರು.

ಗ್ರಾಮದೇವತೆ ಆಂಜನೇಯಸ್ವಾಮಿ ದೇವರ ಉತ್ಸವ ಮೂರ್ತಿ ಸೂಚಿಸುವ ಮನೆಯ ವ್ಯಕ್ತಿ ದೇವರ ಜಮೀನಿನಲ್ಲಿ ಮೊದಲ ಬೇಸಾಯಕ್ಕೆ ಪೂಜೆ ಸಲ್ಲಿಸಿದ ನಂತರ ಉಳಿದ ರೈತರು ಬೇಸಾಯ ಪೂಜೆ ನೆರವೇರಿಸುವುದು ಇಲ್ಲಿನ ಪದ್ಧತಿ.

ಗ್ರಾಮದ ರೈತರು ಮುಂಜಾನೆ ಬೇಸಾಯ ಪರಿಕರಗಳನ್ನು ಸ್ವಚ್ಛಗೊಳಿಸಿ, ಎತ್ತುಗಳ ಮೈ ತೊಳೆದು, ಶೃಂಗರಿಸಿ ನೊಗ ಹೂಡಿದರು. ಮನೆಯಲ್ಲಿ ವಿವಿಧ ತರಹದ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಸಲ್ಲಿಸಿದರು.‌

ಗ್ರಾಮದ ಪ್ರತಿಯೊಬ್ಬ ರೈತರು ದೇವರ ಜಮೀನಿನಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿ ಮಳೆ, ಬೆಳೆಯನ್ನು ಸಮೃದ್ಧಿಯಾಗಿ ನೀಡುವಂತೆ ಪ್ರಾರ್ಥಿಸಿದರು. ಯುಗಾದಿಯಂದು ಮೊದಲ ಬೇಸಾಯ ಆರಂಭ ಮಾಡುವುದು ಪೂರ್ವಜರ ಕಾಲದಿಂದ
ನಡೆದುಕೊಂಡು ಬಂದಿದೆ ಎಂದು ಗ್ರಾಮದ ಹಿರಿಯರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !