ಶನಿವಾರ, ಫೆಬ್ರವರಿ 22, 2020
19 °C

ಶಾಸಕರೆಲ್ಲ ಸಿಎಂ ಮಕ್ಕಳಂತೆ ಇದ್ದೇವೆ: ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಮತಿ: ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಗೊಂದಲ ಆಗಬಾರದು. ಶಾಸಕರೆಲ್ಲ ಮುಖ್ಯಮಂತ್ರಿಯ ಮಕ್ಕಳು ಇದ್ದಂತೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಶನಿವಾರ ಸಂತ ಸೇವಾಲಾಲ್ ಅವರ ಜಯಂತ್ಯುತ್ಸವ ಸಿದ್ಧತೆ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಾತಿ, ಉಪಜಾತಿ, ಸ್ವಾಮೀಜಿ, ಮಠಾಧೀಶರ ಬಗ್ಗೆ ಮಾತನಾಡುವುದಿಲ್ಲ. ನಾನು ಜಾತ್ಯಾತೀತ ವ್ಯಕ್ತಿ. ನನ್ನ ಕ್ಷೇತ್ರದ ಜನರು ನಾನು ಸಚಿವರಾಗಲಿ ಎಂದು ಗೆಲ್ಲಿಸಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾತ್ರ ನನ್ನ ಧ್ಯೇಯ’ ಎಂದರು. 

‘ರಾಜಕೀಯದಲ್ಲಿ ನಾನು ಏನು ತಪ್ಪು ಮಾಡಿದ್ದೇನೆ ಎಂದು ವರಿಷ್ಠರು ನನಗೆ ಕಡಿವಾಣ ಹಾಕುತ್ತಾರೆ. ನನಗೆ ಯಾವ ಹೈಕಮಾಂಡ್ ಕಡಿವಾಣ ಹಾಕಿಲ್ಲ. ಪ್ರಬುದ್ದ ರಾಜಕಾರಣಿ ಆಗಬೇಕು ಎಂಬ ಉದ್ದೇಶದಿಂದ ನನ್ನ ಮಾತುಗಳಿಗೆ ಸ್ವಯಂ ಕಡಿವಾಣ ಹಾಕಿಕೊಂಡಿದ್ದೇನೆ. ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬೇಕು ಎಂದು ಹೇಳುತ್ತೇನೆ ಇದು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಜೀವನದಲ್ಲಿ ಮಹತ್ವಾಂಕಾಕ್ಷೆ ಇದೆ. ರಾಜಕೀಯದಲ್ಲಿ ನಾನು ಇನ್ನೂ ಚಿಕ್ಕವನು. ಇಡೀ ರಾಜ್ಯಕ್ಕೆ ಹೊನ್ನಾಳಿ ಸಂಪರ್ಕ ಸೇತುವೆಯಾಗಿದ್ದು, ದಿ. ಎಚ್.ಎಸ್. ರುದ್ರಪ್ಪ ಮತ್ತು ಪರಮೇಶ್ವರಪ್ಪ ಅವರ ನಂತರ ಮೂರು ದಶಕಗಳ ನಂತರ ನಾನು ಸಚಿವನಾಗಿದ್ದು ನನ್ನ ಪುಣ್ಯ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು