ಹರಿಹರ: ‘ಶೋಷಿತರ ವಿಮೋಚನೆಗಾಗಿ ಬಿ.ಆರ್.ಅಂಬೇಡ್ಕರ್ ಅವರು ಮಾಡಿದ ಹೋರಾಟ ದೇಶದ ನಾಯಕರ ಯೋಚನಾ ಲಹರಿಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಯಿತು’ ಎಂದು ಶಿವಮೊಗ್ಗದ ಉಪನ್ಯಾಸಕ ಪ್ರೊ.ಬಿ.ಎಲ್.ರಾಜು ಹೇಳಿದರು.

ನಗರದ ಮೈತ್ರಿವನದ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆಯ ಸಹಭಾಗಿತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಪದಾಧಿಕಾರಿಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಆಗಿನ ಬಹುತೇಕ ಪ್ರಬಲ ವರ್ಗದ ಆಡಳಿತಗಾರರಿಗೆ ಶೋಷಿತರ ನೋವಿನ ಅರಿವು ಇರಲಿಲ್ಲ. ಮನುಷ್ಯರೆಲ್ಲರೂ ಸಮಾನರು ಎಂಬ ತತ್ವ ಅರಿತಿದ್ದ ಅಂಬೇಡ್ಕರ್, ತಮ್ಮ ಖಚಿತ ಹಾಗೂ ದೃಢ ನಿಲುವಿನ ಮೂಲಕ ಆಡಳಿತಗಾರರ ಆಲೋಚನಾ ಕ್ರಮ ಬದಲಾಗುವಂತೆ ಮಾಡಿದ್ದರು’ ಎಂದು ತಿಳಿಸಿದರು.

‘ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ದೇಶದ ಎಲ್ಲ ಧರ್ಮ, ಜಾತಿ, ಜನಾಂಗದ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗಲು, ಅಹಿಂದ ವರ್ಗದವರಿಗೆ ಮೀಸಲಾತಿ ಸಿಗಲು ಸಾಧ್ಯವಾಯಿತು. ಅಂತಹ ಅಂಬೇಡ್ಕರ್ ಅವರನ್ನು ದಲಿತ ಸಮುದಾಯಕ್ಕೆ ಸೀಮಿತಗೊಳಿಸಿರುವುದು ನೋವಿನ ವಿಷಯ’ ಎಂದು ಹೇಳಿದರು.

‘1970ರ ದಶಕದ ಜೆ.ಪಿ. ಚಳವಳಿ, ದಲಿತ ಪ್ಯಾಂಥರ್ ಚಳವಳಿ, ಸಮಾಜವಾದಿ ಯೋಜನಾ ಸಭಾ, ತುರ್ತು ಪರಿಸ್ಥಿತಿ ಹಾಗೂ ಅಮೆರಿಕದಲ್ಲಿನ ಬಿಳಿಯರ ದಬ್ಬಾಳಿಕೆ ವಿರುದ್ಧದ ಚಳವಳಿಗಳು ಭಾರತೀಯ ಸಮಾಜದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ದಸಂಸ ರಾಜ್ಯ ಘಟಕದ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದರು.

‘ಸಂಘಟನೆಯ ಕಾರ್ಯಕರ್ತರು ಭಾರತದ ಇತಿಹಾಸ ಹಾಗೂ ಪ್ರಭಾವಿ ನಾಯಕರ ಸಾಹಿತ್ಯದ ಪರಿಚಯ ಮಾಡಿಕೊಳ್ಳಬೇಕು. ದೇಶದ ಕಾನೂನು, ಕಾಯ್ದೆ, ಬೆಳವಣಿಗೆಗಳನ್ನು ಅರಿತಿದ್ದರೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಲು ಸಾಧ್ಯ’ ಎಂದು ತಿಳಿಸಿದರು.

ಶಿಬಿರದಲ್ಲಿ ತಮಟೆ, ಕ್ರಾಂತಿ ಗೀತೆ ಹಾಗೂ ಸಂಘಟನಾ ಪದ್ಧತಿ ಕುರಿತು ತರಬೇತಿ ನೀಡಲಾಯಿತು. ಜಿಲ್ಲೆಯ ಆರು ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಎಂ.ಏಳುಕೋಟಿ, ಸಿದ್ದರಾಮಣ್ಣ ಬುಳ್ಳಸಾಗರ, ಅತ್ತಿಗೊಂದಿ ಕರಿಯಪ್ಪ, ಕುಂದವಾಡ ಮಂಜುನಾಥ, ಪಿ.ಜೆ.ಮಹಾಂತೇಶ್ ಹರಿಹರ, ವಿಜಯಲಕ್ಷ್ಮಿ, ಚನ್ನಗಿರಿ ಚಿತ್ರಲಿಂಗಪ್ಪ, ಜಗಳೂರು ಕುಬೇರಪ್ಪ, ನ್ಯಾಮತಿ ಚಂದ್ರಪ್ಪ, ಮಾಲತೇಶ ಕುಂದವಾಡ, ಜೀವನ್, ಹಾಲೇಶ್, ಆವರಗೊಳ್ಳ ದೊಡ್ಡಪ್ಪ, ಕಡ್ಲೆಗೊಂದಿ ತಿಮ್ಮಣ್ಣ, ಡಿ.ರಾಮಪ್ಪ ಹಿಂಡಸಘಟ್ಟ, ಎಂ.ಎಸ್.ಮಂಜುನಾಥ ಕೊಕ್ಕನೂರು, ಚೌಡಪ್ಪ ಭಾನುವಳ್ಳಿ, ಅಂಜಿನಪ್ಪ, ಹನುಮಂತಪ್ಪ, ಸಂಜೀವ್ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-43-620795614

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.