ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಣ್ಣನ ನೆನಪು’ ಗಾಯನಕ್ಕೆ ಜನಸಾಗರ

Last Updated 23 ಫೆಬ್ರುವರಿ 2020, 10:31 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಅಭಿಯಂತ ರಂಗ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಅಣ್ಣನ ನೆನಪು’ ಗಾಯನ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಹಾಡುಗಳನ್ನು ಆಲಿಸಿದರು.

ಡಾ. ರಾಜ್‌ಕುಮಾರ್‌ ಅಭಿನಯಿಸಿದ್ದ ವಿವಿಧ ಚಿತ್ರಗಳ ಗೀತೆಗಳನ್ನು ಹಾಡುಗಾರರು ಮನತುಂಬಿ ಹಾಡಿದರು. ಪ್ರತಿ ಹಾಡಿನ ಹಿನ್ನೆಲೆ, ಚಿತ್ರದ ಹಿನ್ನೆಲೆಯನ್ನು ನಿರೂಪಕರು ಮನೋಜ್ಞವಾಗಿ ತಿಳಿಸಿಕೊಟ್ಟರು. ಸಭಾಂಗಣ ತುಂಬಿ ಹೊರಗಡೆಯೂ ಕುರ್ಚಿ ಹಾಕಿಕೊಂಡು ಕುಳಿತು, ಕುರ್ಚಿ ಸಿಗದವರು ನಿಂತು ಹಾಡುಗಳಿಗೆ ತಲೆದೂಗಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕುರ್ಕಿ, ಜಯಪ್ರಕಾಶ್‌ ಕೊಂಡಜ್ಜಿ, ಅಭಿಯಂತ ರಂಗದ ಆರ್‌.ಟಿ. ಅರುಣ್‌ಕುಮಾರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT