ಬುಧವಾರ, ಅಕ್ಟೋಬರ್ 16, 2019
22 °C

ಅಂತರ ಜಿಲ್ಲಾ ಕಳ್ಳರ ಬಂಧನ: ₹1.33 ಲಕ್ಷ ವಶ

Published:
Updated:

ದಾವಣಗೆರೆ: ಆನಗೋಡು ಪಾರ್ಕ್‌ ಬಳಿ ಹಾಲಿನ ವ್ಯಾಪಾರಿಗಳಿಗೆ ಖಾರದ ಪುಡಿ ಎರಚಿ ಹಣವನ್ನು ದೋಚಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು ₹1.33 ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ.

ಭರಮಸಾಗರದ ನಿವಾಸಿಗಳಾದ ಅನಿಲ್ ಕುಮಾರ್, ದಿನೇಶ, ರಾಕೇಶ್, ಲೋಹಿತ್ ಬಂಧಿತರು.

ಅ.1ರಂದು ವ್ಯಾಪಾರಿ ವಿನಾಯಕ ಮತ್ತು ಚಾಲಕ ಅನಿಲ್ ಅವರು ಹಿರಿಯೂರಿಗೆ ನಂದಿನಿ ಹಾಲು, ಕ್ರೇಟ್ ಕೊಟ್ಟು ಹಾಲಿನ ಹಣವನ್ನು ಸಂಗ್ರಹಿಸಿಕೊಂಡು ದಾವಣಗೆರೆಗೆ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಗಳು ಲಾರಿಗೆ ಅಡ್ಡ ಹಾಕಿ ವಿನಾಯಕ ಅವರಿಗೆ ಖಾರದ ಪುಡಿ ಎರಚಿ ಬ್ಯಾಗ್‌ನಲ್ಲಿ ಹಣವನ್ನು ಕಿತ್ತುಕೊಂಡು ಹೋಗಿದ್ದರು.

ಈ ಕುರಿತು ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆಯಲ್ಲಿ ದಾವಣಗೆರೆ ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಚ್. ಗುರುಬಸವರಾಜ, ಪಿಎಸ್‍ಐ ಸಂಜೀವ್ ಕುಮಾರ್, ಎಎಸ್‌ಐ ಜೋವಿತ್ ರಾಜ್, ಸಿಬ್ಬಂದಿ ಪ್ರಕಾಶ್, ಸಂತೋಷ ಕುಮಾರ್ ಹಾಗೂ ಹನುಮಂತಪ್ಪ ಪಾಲ್ಗೊಂಡಿದ್ದರು.

Post Comments (+)