ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಹಿಳೆಗೆ ಹಲ್ಲೆ ಮಾಡಿ ₹4 ಲಕ್ಷದಿಂದ ₹ 5 ಲಕ್ಷದವರೆಗೆ ಹಣ ದೋಚಿ ಪರಾರಿ

Published 14 ಸೆಪ್ಟೆಂಬರ್ 2023, 4:27 IST
Last Updated 14 ಸೆಪ್ಟೆಂಬರ್ 2023, 4:27 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಕುಂದವಾಡ ರಸ್ತೆಯಲ್ಲಿನ ಲೇಕ್‌ವೀವ್ ಬಡಾವಣೆಯಲ್ಲಿ ಕಳ್ಳನೊಬ್ಬ ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿ ₹4 ಲಕ್ಷದಿಂದ ₹ 5 ಲಕ್ಷದವರೆಗೆ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಶ್ರೀನಾಥ್ ಅವರ ಪತ್ನಿ ಯೊಗೇಶ್ವರಿ ಕಳ್ಳನಿಂದ ತೀವ್ರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀನಾಥ್ ಅವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಹಿಳೆ ಒಂಟಿಯಾಗಿ ಇದ್ದುದನ್ನು ಗಮನಿಸಿ ಕಳ್ಳತನ ಮಾಡಿದ್ದಾನೆ. ಯೋಗೇಶ್ವರಿ ಮನೆಯ ಬಾಗಿಲು ತೆರೆದು ಕಸ ಹಾಕಲು ಹೊರಗಡೆ ಹೋದಾಗ, ಅಲ್ಲಿಯೇ ಕಾಯುತ್ತಿದ್ದ ಕಳ್ಳ ಮನೆಯ ಒಳಗೆ ನುಗ್ಗಿದ್ದಾನೆ.

ಮನೆಯೊಳಗಡೆ ಇದ್ದ ಯೋಗೇಶ್ವರಿ ಅವರ 8 ವರ್ಷದ ಪುತ್ರನಿಗೆ ಥಳಿಸಿ, ಕೊಠಡಿಯೊಳಗೆ ಕೂಡಿ ಹಾಕಿದ್ದಾನೆ. ಅಲ್ಲದೇ ಹೊರಗಡೆ ಬರದಂತೆ ಬಾಲಕನಿಗೆ ಬೆದರಿಕೆಯೊಡ್ಡಿದ್ದಾನೆ. ಬಳಿಕ ಬಾಗಿಲಿನ ಹಿಂದೆ ಅಡಗಿ ಕುಳಿತಿದ್ದ ಕಳ್ಳ ಯೋಗೇಶ್ವರಿ ಅವರು ಕಸ ಹಾಕಿ ಮನೆಯೊಳಗೆ ಬರುತ್ತಿದ್ದಂತೆಯೇ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಚಾಕು ತೋರಿಸಿ ಹಣ, ಒಡವೆ ನೀಡುವಂತೆ ಧಮಕಿ ಹಾಕಿದ್ದಾನೆ.

ಮಗನ ಚಿಕಿತ್ಸೆಗಾಗಿ ಇಟ್ಟಿದ್ದ ಹಣವನ್ನು ಕಳ್ಳ ದೋಚಿ ಪರಾರಿಯಾಗಿದ್ದಾನೆ. ಕಳ್ಳ ಮನೆಯ ಒಳಗೆ ಹಾಗೂ ಹೊರಗೆ ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯೋಗೇಶ್ವರಿ
ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯೋಗೇಶ್ವರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT