ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತರಳಬಾಳು ಪ್ರಾಥಮಿಕ ಶಾಲೆಗೆ ‘ಸಮಗ್ರ ಪ್ರಶಸ್ತಿ’

Published 8 ಆಗಸ್ಟ್ 2024, 16:20 IST
Last Updated 8 ಆಗಸ್ಟ್ 2024, 16:20 IST
ಅಕ್ಷರ ಗಾತ್ರ

ದಾನಿಹಳ್ಳಿ (ನ್ಯಾಮತಿ): ಗ್ರಾಮದ ಹೊರವಲಯದ ತರಳಬಾಳು ಜಗದ್ಗುರು ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನ್ಯಾಮತಿ ವಲಯಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ 14 ವರ್ಷದೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸಿ.ಆರ್.ಶ್ವೇತಾ ತಿಳಿಸಿದರು.

ಬಾಲಕರ ವಿಭಾಗದಲ್ಲಿ ಕೊಕ್ಕೊ(ಪ್ರಥಮ), 4x100 ರಿಲೇ (ಪ್ರಥಮ), ಸಿದ್ದಾರ್ಥ 100 ಮೀಟರ್ ಓಟ (ದ್ವಿತೀಯ), ತೇಜಸ್ ಹರ್ಡಲ್ಸ್ (ದ್ವಿತೀಯ), ಜೀವನ ಉದ್ದ ಜಿಗಿತ (ಪ್ರಥಮ), ಚೆಸ್ ನಂದೀಶ ಚಿರಾಗ್ (ಪ್ರಥಮ) ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಕೊಕ್ಕೊ (ಪ್ರಥಮ), 4x100 ರಿಲೇ (ಪ್ರಥಮ), ದೀಕ್ಷಿತಾ ಉದ್ದ ಜಿಗಿತ (ಪ್ರಥಮ), ಸಾಕ್ಷಿ (ತೃತೀಯ), ಇಂಚರಾ ಎತ್ತರ ಜಿಗಿತ (ಪ್ರಥಮ), ದೀಕ್ಷಿತಾ (ದ್ವಿತೀಯ), ಸಾಕ್ಷಿ ಹರ್ಡಲ್ಸ್‌ (ಪ್ರಥಮ), ಯೋಗ ಸ್ಪರ್ಧೆಯಲ್ಲಿ ಪ್ರೇಮಾ, ಸಂಜನಾ, ಪ್ರತೀಕ್ಷಾ (ಪ್ರಥಮ), ಸಾಕ್ಷಿ 100 ಮೀಟರ್‌ ಓಟ (ದ್ವಿತೀಯ), ದೀಕ್ಷಿತಾ 400 ಮೀಟರ್ ಓಟ (ದ್ವಿತೀಯ) ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT