ಶುಕ್ರವಾರ, ನವೆಂಬರ್ 22, 2019
25 °C

ಅಯೋಧ್ಯೆ ತೀರ್ಪು ಐತಿಹಾಸಿಕ: ಶಾಸಕ ರೇಣುಕಾಚಾರ್ಯ

Published:
Updated:

ದಾವಣಗೆರೆ: ಅಯೋಧ್ಯೆ ತೀರ್ಪು ಐತಿಹಾಸಿಕ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದ ಕೆ.ಬಿ.ಬಡಾವಣೆಯ 25ನೇ ವಾರ್ಡ್‌ ಅಭ್ಯರ್ಥಿ ಎಸ್‌.ಟಿ. ವೀರೇಶ್‌ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಬಹುದಿನಗಳಿಂದ ಕಂಡಿದ್ದ ರಾಮಮಂದಿರ ನಿರ್ಮಾಣದ ಕನಸು ಸಂಘರ್ಷದಿಂದ ಸಾಧ್ಯವಾಗಿರಲಿಲ್ಲ. ದಶಕಗಳಿಂದ ಕಾಯುತ್ತಿದ್ದ ತೀರ್ಪು ಇಂದು ಬಂದಿರುವುದು ಸ್ವಾಗತಾರ್ಹ. ಹಿಂದೂ–ಮಸ್ಲಿಮರು ಸೌಹಾರ್ದದಿಂದ ಬಾಳುತ್ತಿದ್ದೇವೆ. ಜನರು ಶಾಂತಿ ಕಾಪಾಡಬೇಕು’ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)