ಸೋಮವಾರ, ಫೆಬ್ರವರಿ 24, 2020
19 °C

ಲೇಬರ್ ಕಾಲೊನಿಯಲ್ಲಿ ಅಯ್ಯಪ್ಪಸ್ವಾಮಿ ದೀಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ಲೇಬರ್ ಕಾಲೊನಿಯ ಶ್ರೀಸ್ವಾಮಿ ಅಯ್ಯಪ್ಪ ಶಬರಿಮಲೈ ಸೇವಾ ಸಮಿತಿಯಿಂದ ಡಿ.14ರಿಂದ 16ರವರೆಗೆ ಅಯ್ಯಪ್ಪಸ್ವಾಮಿ ದೀಪೋತ್ಸವ, ಮೆರವಣಿಗೆ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ರವಿಕುಮಾರ್ ನಿಬ್ಗೂರು ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಡಿ.14ರಂದು ಬೆಳಗ್ಗೆ 6ಕ್ಕೆ ಅಷ್ಟೋತ್ತರ ಮಹಾಪೂಜೆ ನಡೆಯಲಿದ್ದು, ಜರುಗಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ. ಡಿ. 15ರಂದು ಅಭಿಷೇಕ, ದೀಪೋತ್ಸವ ಮೆರವಣಿಗೆ ನಡೆಯಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ವಿ. ರಾಮಚಂದ್ರ ದೀಪೋತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ’ ಎಂದು ಹೇಳಿದರು.

ಮೆರವಣಿಗೆಯೂ ಲೇಬರ್ ಕಾಲೊನಿಯಿಂದ ಕೆಟಿಜೆ ನಗರ, ವಿದ್ಯಾರ್ಥಿಭವನ, ಎವಿಕೆ ರಸ್ತೆ, ರೇಣುಕಾಮಂದಿರ, ಪಿಬಿ ರಸ್ತೆ, ಗಾಂಧಿವೃತ್ತ, ಜನತಾಹೋಟೆಲ್, ಕಿರುವಾಡಿವೃತ್ತ, ಬಳ್ಳಾರಿ ಪಾರ್ಕ್ ಹಾಗೂ ಶಿವಪ್ಪಯ್ಯ ವೃತ್ತದ ಮುಖಾಂತರ ದೇವಸ್ಥಾನ ತಲುಪಲಿದೆ. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು, ನಾದಸ್ವರ, ನಂದಿಕೋಲು, ಜನಪದ ಮೇಳಗಳು ಮೆರಗು ನೀಡಲಿವೆ ಎಂದರು.

ಡಿ. 16ರಂದು ಬೆಳಿಗ್ಗೆ 5ರಿಂದ ಅಗ್ನಿಕುಂಡ ಹರಕೆ ಅರ್ಪಿಸಲಾಗುವುದು. 6.30ಕ್ಕೆ ಮಹಾಮಂಗಳಾರತಿ, ಬಾಳೆ ಮಂಟಪ ವಿಸರ್ಜನೆ ಜರುಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ, ಮಾಲತೇಶ್ ಪುರೋಹಿತ್, ಗುರುಸ್ವಾಮಿ, ಶಿವಕುಮಾರ್, ಹನುಮಂತಸ್ವಾಮಿ, ಲಕ್ಷ್ಮಣ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)