ಬಸವಾಪಟ್ಟಣ: ಇಲ್ಲಿನ ಚಿನ್ಮೂಲಾದ್ರಿ ಶ್ರೇಣಿ ಬೆಟ್ಟದ ತಪ್ಪಲಿನಲ್ಲಿರುವ ಮುಸ್ಲಿಂ ಸಂತ ದಾದಾ ಮೀರ್ ಖಲಂದರ್ ಬಾಬಾ ಬುಡೇನ್ ಅವರ ಗದ್ದುಗೆಯಲ್ಲಿ ವಾರ್ಷಿಕ ಉರುಸ್ ಶನಿವಾರ ನಡೆಯಲಿದೆ.

ಉರುಸ್ ಅಂಗವಾಗಿ ಶುಕ್ರವಾರ ಸಂಜೆ ನಡೆದ ಸಂದಲ್ ಉತ್ಸವದಲ್ಲಿ ಇಲ್ಲಿನ ಹಾಲಸ್ವಾಮಿಗಳ ಮೂಲ ಮಠದಿಂದ ಗಂಧವನ್ನು ಸ್ವೀಕರಿಸಿ, ಅಬ್ದುಲ್ ಸುಭಾನ್ಸಾಬ್ ಮಕಾಂದಾರ್, ಸರ್ಗಿರೋ ಮಕಾನ್, ಲಾಲ್ಷಾ ಮಕಾನ್, ಭಂಡಾರಿ ಮಕಾನ್, ಮಂಜೂಷಾ ಮಕಾನ್ ಮೂಲಕ ಬಾಬಾ ಬುಡೇನ್ ಅವರ ದರ್ಗಾ ತಲುಪಿ, ಫಾತೇಹಾದೊಂದಿಗೆ ಗದ್ದುಗೆಗೆ ಅರ್ಪಿಸಲಾಯಿತು.

ಶನಿವಾರ ಮುಸ್ಲಿಂ ಸಂಪ್ರದಾಯದಂತೆ ಬಾಬಾ ಬುಡೇನ್ ಅವರ ಉರುಸ್ ಆಚರಿಸಲಾಗುವುದು. ಉರುಸ್ ಅಂಗವಾಗಿ ರಾತ್ರಿ ಪ್ರಸಿದ್ಧ ಕವ್ವಾಲ್ ಗಾಯಕರಾದ ವಾರಿಸ್ ಸಾಬ್ರಿ ಗುಜ್ರಾತ್ ಮತ್ತು ಸಿರಾಜ್ ಚಿಸ್ತಿ ಗುಜ್ರಾತ್ ಇವರಿಂದ ಖವ್ವಾಲಿ ಗಾಯನ ಏರ್ಪಡಿಸಲಾಗಿದೆ.

ಉರುಸ್ ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕ ಕೆ.ಎಸ್.ಬಸವಂತಪ್ಪ, ವಕ್ಫ್ ಬೋರ್ಡ್ ಅಧಿಕಾರಿ ಸೈಯದ್ ಮೌಜಂ ಪಾಷಾ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಉರುಸ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.