ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಸಮುದಾಯದ ಹಿತರಕ್ಷಣೆಗೆ ಮುಂದಾಗಲಿ: ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ

Last Updated 17 ಮೇ 2022, 3:44 IST
ಅಕ್ಷರ ಗಾತ್ರ

ಭಾಯಾಘಡ್ (ನ್ಯಾಮತಿ): ಬಂಜಾರ ಸಮುದಾಯದ ಮುಖಂಡರು ಯಾವುದೇ ಪಕ್ಷದಲ್ಲಿದ್ದರೂ ಪಕ್ಷಾತೀತವಾಗಿ ಸಮುದಾಯದ ಅಭಿವೃದ್ಧಿಗೆ ಸಮಯ ಮೀಸಲಿಡಬೇಕು ಎಂದು ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ನ್ಯಾಮತಿ ತಾಲ್ಲೂಕಿನ ಸಂತ ಸೇವಾಲಾಲ್ ಅವರ ಜನ್ಮಸ್ಥಾನ ಸೂರಗೊಂಡನಕೊಪ್ಪ ಭಾಯಾಘಡ್‌ನಲ್ಲಿ ಸೋಮವಾರ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಆಯೋಜಿಸಿದ್ದ ಸಂತ ಸೇವಾಲಾಲ್ ಮತ್ತು ಮರಿಯಮ್ಮದೇವಿ ದೇಗುಲ ಪ್ರತಿಷ್ಠಾಪನಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎರಡೂವರೆ ದಶಕಗಳ ಹಿಂದೆ ಸೇವಾಲಾಲ್ ಮತ್ತು ಮರಿಯಮ್ಮ ದೇಗುಲದ ಸಣ್ಣ ಗುಡಿಯಲ್ಲಿ ಪೂಜಿಸುತ್ತಿದ್ದುದು, ಇಂದು ದೊಡ್ಡ ಯಾತ್ರಾ ಸ್ಥಳವಾಗಿದೆ. ಬಂಜಾರ ಸಮುದಾಯಕ್ಕೆ 9 ಸಾವಿರ ವರ್ಷಗಳ ಇತಿಹಾಸವಿದೆ. ಸಮುದಾಯ ಶೈಕ್ಷಣಿಕವಾಗಿ ಬೆಳೆಯಬೇಕಿದೆ’ ಎಂದರು.

‘ನಾನು ಹಾಗೂ ಕುಡಚಿ ಶಾಸಕ ರಾಜೀವ ಅವರು ಎಸ್‌ಸಿ, ಎಸ್‌ಟಿ ಸಮಿತಿ ಸದಸ್ಯರಿದ್ದು, ಮೀಸಲಾತಿ ಮತ್ತು ಸದಾಶಿವ ಆಯೋಗ ವರದಿ ಜಾರಿ ಮಾಡುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಉಪಾಧ್ಯಕ್ಷ ಡಾ.ಎಲ್. ಈಶ್ವರ ನಾಯ್ಕ ಮಾತನಾಡಿ, ‘25 ವರ್ಷಗಳಿಂದ ದೇಗುಲ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಶ್ರಮಿಸುತ್ತಿರುವ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ’ ಎಂದು ತಿಳಿಸಿದರು.

ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ ಮಾತನಾಡಿ, ‘ಬಂಜಾರ ಸಮುದಾಯ ಉಡುಗೆ, ತೊಡುಗೆಗೆ ಸೀಮಿತವಾಗದೇ, ಸಂಸ್ಕೃತಿ–ಕಲೆ–ವಿಚಾರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಮಾಡಬೇಕು’ ಎಂದರು.

ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಮುಖಂಡರಾದ ಶಿವಮೂರ್ತಿ ನಾಯ್ಕ ಮಾತನಾಡಿದರು.

ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ. ರಾಜೀವ, ಬಿ.ಬಾಲರಾಜ, ರಾಮನಾಯ್ಕ,ಆರ್.ವಿನಾಯ್ಕ, ಚೂಡನಾಯ್ಕ, ಎಸ್.ಎನ್. ಗೋಪಾಲನಾಯ್ಕ, ಸವಿತಾಬಾಯಿ, ಮಾರುತಿನಾಯ್ಕ, ಶಿವರಾಮನಾಯ್ಕ, ಓಂಕಾರನಾಯ್ಕ, ಸುರೇಂದ್ರನಾಯ್ಕ, ಜಯದೇವನಾಯ್ಕ, ಜಲಜಾನಾಯ್ಕ, ಅನಸೂಯಾ, ಆರ್ಚಕ ಸೇವ್ಯಾನಾಯ್ಕ, ಓಂಕಾರನಾಯ್ಕ ಇದ್ದರು.

ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಪ್ರೊ. ಹ.ರಾ. ಮಹೇಶಬೌದ್ಧ ಅವರು ಸೇವಾಲಾಲ್, ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ಹಾಗೂ ಭಾರತದ ಸಂವಿಧಾನ ಕುರಿತು ಉಪನ್ಯಾಸ ನೀಡಿದರು.

ಮಹಾಮಠ ಸಮತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಕ ಸ್ವಾಗತಿಸಿದರು.

.....

ಬಂಜಾರ ಸಮುದಾಯದಲ್ಲಿ ಯವಕರು ಮತಾಂತರವಾಗುತ್ತಿರುವ ಬಗ್ಗೆ ವದಂತಿ ಇದೆ. ಅಂತಹವರನ್ನು ಮರಳಿ ಕರೆತರುವ ಬಗ್ಗೆ ಸಮಾಜದ ಮುಖಂಡರು ಚಿಂತನೆ ಮಾಡಬೇಕಿದೆ.
– ಎಂ.ಪಿ. ರೇಣುಕಾಚಾರ್ಯ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT