ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಖಾತೆಗೆ ಕನ್ನ: ದೂರು

Last Updated 18 ಮೇ 2019, 20:16 IST
ಅಕ್ಷರ ಗಾತ್ರ

ದಾವಣಗೆರೆ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಖಾತೆಗೆ ಕನ್ನ ಹಾಕಿ ₹1.99 ಲಕ್ಷವನ್ನು ವಂಚಿಸಿದ್ದಾರೆ.

ಹರಿಹರ ಪಟ್ಟಣದ ಡಿ.ಆರ್‌.ಸಾಗರ್‌ ಹಣ ಕಳೆದುಕೊಂಡವರು. ಇವರು ಹರಿಹರ ವಿಜಯಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, 7 ವರ್ಷಗಳಿಂದ ಮೇಲ್‌ ಬಳಸುತ್ತಿದ್ದು, ಬ್ಯಾಂಕ್ ಖಾತೆಗೆ ಅಳವಡಿಸಿದ್ದಾರೆ.

ಮೇ 14ರಂದು 15ರಂದು ಒಟ್ಟು ₹1ಲಕ್ಷವನ್ನು ವಂಚಿಸಲಾಗಿದೆ.

ಸಂಬಂಧಪಟ್ಟ ಬ್ಯಾಂಕ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಠಾಣೆಗೆ ದೂರು ನೀಡಿ ಪ್ರತಿಯನ್ನು ತಂದುಕೊಟ್ಟರೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

‘ಎಟಿಎಂ ಕಾರ್ಡ್‌ ನನ್ನ ಬಳಿಯೇ ಇದ್ದು, ಕಾರ್ಡ್‌ನ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ಬ್ಯಾಂಕ್‌ನ ದೋಷಪೂರಿತ ಎಟಿಎಂ ಮೆಷಿನ್‌ಗಳು ಹಣ ಕಳೆದುಕೊಳ್ಳಲು ಕಾರಣ’ ಎಂದು ದಾವಣಗೆರೆ ಸಿಇಎನ್ ಠಾಣೆಗೆ ಸಾಗರ್ ದೂರು ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಚನ್ನಗಿರಿ ತಾಲ್ಲೂಕಿನ ಮುಗಳಿಹಳ್ಳಿ ಗ್ರಾಮದ ಡಿ.ಎಂ. ಮಂಜುನಾಥ್ ಅವರ ಖಾತೆಯಿಂದ ₹99,500ವನ್ನು ಡ್ರಾ ಮಾಡಲಾಗಿದೆ.

‘ಮೇ 1ರಂದು ಕಿಶೋರ್ ಕುಮಾರ್‌ ಯಾದವ್‌ ಅವರ ಖಾತೆಗೆ ₹40ಸಾವಿರ ವರ್ಗಾವಣೆಯಾಗಿದ್ದು, ಉಳಿದ ಹಣ ₹10ಸಾವಿರಂದಂತೆ ನಾಲ್ಕು ಹಾಗೂ ಒಂದು ₹19,500 ಹಣ ಡ್ರಾ ಆಗಿದೆ. ಎಟಿಎಂ ಕಾರ್ಡ್‌ ನನ್ನ ಬಳಿಯೇ
ಇದ್ದು, ಬ್ಯಾಂಕ್‌ನಿಂದ ಹೇಗೆ ಸೋರಿಕೆಯಾಗಿದೆ ಎಂಬುದು ನನಗೆ ತಿಳಿಯುತ್ತಿಲ್ಲ’ ಎಂದು ಮಂಜುನಾಥ್‌ ಅವರು ದಾವಣಗೆರೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಅಪಘಾತ: ಬೈಕ್ ಸವಾರ ಸಾವು

ದಾವಣಗೆರೆ: ತಾಲ್ಲೂಕಿನ ಜಗಳೂರು ರಸ್ತೆಯ ಮೆಳಕಟ್ಟೆ ಹಾಗೂ ಆಲೂರು ಹಟ್ಟಿ ಬಳಿ 10 ಚಕ್ರದ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸವಾರರೊಬ್ಬರು ಶನಿವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಾಜಸ್ಥಾನ ಮೂಲದ ನೀಲೇಶ್‌ಮೂರ್ತಿ (28) ಮೃತಪಟ್ಟವರು. ಪಾತ್ರೆಗಳ ಮಾರಾಟ ಮಾಡುತ್ತಿದ್ದ ಈತ ಪಿಗ್ಮಿ ಸಂಗ್ರಹಿಸಿಕೊಂಡು ದಾವಣಗೆರೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಎಂ ಸ್ಯಾಂಡ್‌ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT