ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಅರಕೆರೆಯ ಕರ್ನಾಟಕ ಬ್ಯಾಂಕ್ನಲ್ಲಿ ನಡೆದಿದ್ದ ಕಳವಿಗೂ ಹಾಗೂ ನ್ಯಾಮತಿಯ ಭಾರತೀಯ ಸ್ಟೇಟ್ ಬ್ಯಾಂಕ್ಗೆ (ಎಸ್ಬಿಐ) ಕನ್ನ ಹಾಕಿರುವ ಕೃತ್ಯಕ್ಕೂ ಹೋಲಿಕೆ ಕಾಣಿಸಿಕೊಂಡಿದೆ. ವೃತ್ತಿಪರ ಕಳ್ಳರೇ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ದಿಕ್ಕಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಅರಕರೆಯ ಬ್ಯಾಂಕ್ನಲ್ಲಿ 2013ರ ಆಗಸ್ಟ್ನಲ್ಲಿ ₹ 3 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಕಿಟಕಿಯ ಸರಳು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಗ್ಯಾಸ್ ಕಟರ್ ಮೂಲಕ ಭದ್ರತಾ ಕೊಠಡಿಯಲ್ಲಿದ್ದ ಸುರಕ್ಷತಾ ತಿಜೋರಿ (ಚೆಬ್ಸ್) ಒಡೆದು ಆಭರಣ ದೋಚಿದ್ದರು. ಈ ಪ್ರಕರಣ ಭೇದಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. 2019ರಲ್ಲಿಯೂ ಇದೇ ಬ್ಯಾಂಕ್ನಲ್ಲಿ ಕಳವು ಮರುಕಳಿಸಿತ್ತು. ಇದೇ ಮಾದರಿಯ ಕೃತ್ಯ ನ್ಯಾಮತಿಯ ಎಸ್ಬಿಐನಲ್ಲಿಯೂ ನಡೆದಿದೆ. ಉತ್ತರ ಭಾರತದ ಈ ತಂಡವೇ ಕಳವು ಮಾಡಿರುವ ಬಗ್ಗೆ ಅನುಮಾನಗಳು ದಟ್ಟವಾಗಿವೆ.

ಎಸ್ಬಿಐ ಬ್ಯಾಂಕಿನ ಕಿಟಕಿಯ ಸರಳು ಹಾಗೂ ಚಬ್ಸ್ ಕತ್ತರಿಸಿದ ರೀತಿ ಕಳ್ಳರ ಕೌಶಲ್ಯವನ್ನು ತೋರಿಸಿದೆ. ಎಲ್ಲ ಸರಳುಗಳನ್ನು ಏಕರೂಪದಲ್ಲಿ ಕತ್ತರಿಸಿ ಸಣ್ಣ ಸಾಕ್ಷ್ಯವೂ ಉಳಿಯದಂತೆ ಎಚ್ಚರವಹಿಸಿದ್ದಾರೆ. ಚಿನ್ನಾಭರಣ ಅಡವಿಟ್ಟಿದ್ದ ಸುರಕ್ಷತಾ ತಿಜೋರಿ (ಚೆಬ್ಸ್) ಲಾಕ್ ಭಾಗವನ್ನು ಗುರುತಿಸಿ ಕತ್ತರಿಸಿದ್ದಾರೆ. ಪರಿಣತರು ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ ಎಂಬುದು ಪೊಲೀಸರ ಅಭಿಪ್ರಾಯ.

ಕಳವು ಕೃತ್ಯಕ್ಕೂ ಮುನ್ನ ದುಷ್ಕರ್ಮಿಗಳು ಬ್ಯಾಂಕ್ಗೆ ಬಂದಿರುವ ಹಾಗೂ ವಹಿವಾಟಿನ ಬಗ್ಗೆ ಗೊತ್ತಿರುವವರು ಇದರಲ್ಲಿ ಭಾಗಿಯಾಗಿರುವ ಅನುಮಾನದ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಿಂಗಳ ಹಿಂದಿನಿಂದ ಬ್ಯಾಂಕಿಗೆ ಬಂದು ಹೋದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಅಪರಿಚಿತರು ಹಾಗೂ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ವಿಚಾರಿಸುತ್ತಿದ್ದಾರೆ.

ಮಾರುತಿ ವಾಹನದ ಮೇಲೆ ಸಂಶಯ:

ನ್ಯಾಮತಿ ಪಟ್ಟಣದಲ್ಲಿ ರಾತ್ರಿ ವೇಳೆ ಸಂಚರಿಸಿದ ಮಾರುತಿ ವಾಹನವೊಂದರ ಮೇಲೆ ಪೊಲೀಸರು ಸಂಶಯ ವ್ಯಕ್ತಪಡಿಸಿ ತನಿಖೆ ನಡೆಸುತ್ತಿದ್ದಾರೆ. ಈ ವಾಹನದ ಪತ್ತೆಗೆ ಪೊಲೀಸರು ಪ್ರಯತ್ನಪಡುತ್ತಿದ್ದಾರೆ.

ಅ.27ರಂದು ತಡರಾತ್ರಿ ಪಟ್ಟಣದ ನೆಹರೂ ರಸ್ತೆಯಲ್ಲಿ ಈ ವಾಹನ ಸಂಚರಿಸಿದ ಸುಳಿವು ಲಭ್ಯವಾಗಿದೆ. ಬ್ಯಾಂಕ್ ಸಮೀಪ ಸುಮಾರು 20 ನಿಮಿಷ ನಿಲುಗಡೆ ಮಾಡಿರುವ ಸಿ.ಸಿ.ಟಿವಿ ದೃಶ್ಯಾವಳಿಯನ್ನು ತನಿಖಾ ತಂಡ ಸಂಗ್ರಹಿಸಿದೆ. ವಾಹನದ ಸಂಖ್ಯೆ ಅಸ್ಪಷ್ಟವಾಗಿದ್ದು, ಪತ್ತೆ ಕಾರ್ಯಕ್ಕೆ ತೊಡಕಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.