ಬುಧವಾರ, ನವೆಂಬರ್ 13, 2019
25 °C

ಮನೆ ಮೇಲಿನಿಂದ ಬಿದ್ದು ಬ್ಯಾಂಕ್‌ ಅಧಿಕಾರಿ ಸಾವು

Published:
Updated:
Prajavani

ದಾವಣಗೆರೆ: ಮನೆಯ ಮೇಲಿನ ನೀರಿನ ಟ್ಯಾಂಕಿಯನ್ನು ಸ್ವಚ್ಛಗೊಳಿಸಲು ಹೋಗಿದ್ದ ಬ್ಯಾಂಕ್‌ ಅಧಿಕಾರಿ ಶನಿವಾರ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಇಲ್ಲಿನ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದ ಸತ್ಯಾನಂದ ಮುತ್ತಣ್ಣವರ (35) ಮೃತಪಟ್ಟವರು. ಬೆಳಗಾವಿ ಜಿಲ್ಲೆಯ ಗೋಕಾಕದ ಅವರು ಇಲ್ಲಿನ ಸಿದ್ಧವೀರಪ್ಪ ಬಡಾವಣೆಯಲ್ಲಿ ವಾಸವಾಗಿದ್ದರು. ಶನಿವಾರ ಮನೆಯ ಎರಡನೇ ಅಂತಸ್ತಿನಲ್ಲಿರುವ ಟ್ಯಾಂಕಿ ಸ್ವಚ್ಛಗೊಳಿಸಲು ಹೋಗಿದ್ದ ವೇಳೆ ಕೆಳಗೆ ಬಿದ್ದಿದ್ದು, ಆಸ್ಪತ್ರೆಗೆ ಒಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಮಾಜಿ ಶಾಸಕ ಎಂ.ಎಲ್. ಮುತ್ತಣ್ಣವರ ಅವರ ಪುತ್ರ ಸತ್ಯಾನಂದ ಅವರಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಪುಟ್ಟ ಮಗಳು ಇದ್ದಾಳೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)