ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸನಾಳ್‌ನಲ್ಲಿ ಶೇ 2.33, ಅರಸೀಕೆರೆಯಲ್ಲಿ ಶೇ 97.01 ಮತದಾನ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶೇ 73.02 ಮತ ಚಲಾಯಿಸಿದ ಜನ
Last Updated 24 ಏಪ್ರಿಲ್ 2019, 20:43 IST
ಅಕ್ಷರ ಗಾತ್ರ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಎನ್‌. ಬಸನಾಳ್‌ನಲ್ಲಿರುವ 97ನೇ ಬೂತ್‌ನಲ್ಲಿ 387 ಮತದಾರರಲ್ಲಿ 9 ಮಂದಿ ಮಾತ್ರ ಮತದಾನ ಮಾಡಿದ್ದು, ಅತಿ ಕಡಿಮೆ ಶೇ 2.33 ಪ್ರಮಾಣ ದಾಖಲಾಗಿದೆ. ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯ 9ನೇ ಬೂತ್‌ನಲ್ಲಿ ಅತಿ ಹೆಚ್ಚು (ಶೇ 97.01) ಪ್ರಮಾಣ ದಾಖಲಾಗಿದೆ. 735 ಮತದಾರರಲ್ಲಿ 713 ಮಂದಿ ಮತ ಚಲಾಯಿಸಿದ್ದಾರೆ.

ದಾವಣಗೆರೆ ಲೋಕಸಭಾ ವ್ಯಾಪ್ತಿಯಲ್ಲಿ ಅಂತಿಮವಾಗಿ ಶೇ 73.03 ಮತಚಲಾವಣೆಯಾಗಿದೆ. ವಿಧಾನಸಭಾವಾರು ಲೆಕ್ಕಾಚಾರದಲ್ಲಿ ಮತಗಳಿಕೆಯಲ್ಲಿ ಹೊನ್ನಾಳಿ ಕ್ಷೇತ್ರವು (ಶೇ 80.01) ಮೊದಲ ಸ್ಥಾನದಲ್ಲಿದ್ದರೆ ದಾವಣಗೆರೆ ಉತ್ತರ (ಶೇ 65.71) ಕೊನೇ ಸ್ಥಾನದಲ್ಲಿದೆ.

ಪುರುಷರು ಶೇ 75 ಪುರುಷರು, ಶೇ 71 ಮಹಿಳೆಯರಿಂದ ಮತ: ಜಿಲ್ಲೆಯಲ್ಲಿ 8,22,593 ಪುರುಷ ಮತದಾರರಿದ್ದು, ಅವರಲ್ಲಿ 6,17,298 ಮಂದಿ ಮತ ಚಲಾಯಿಸಿದ್ದಾರೆ. ಶೇ 75.04 ದಾಖಲಾಗಿದೆ. 8,09,744 ಮಹಿಳಾ ಮತದಾರರಿದ್ದು, 5,74,856 ಮಂದಿ (ಶೇ 70.99) ಹಕ್ಕು ಚಲಾಯಿಸಿದ್ದಾರೆ. 129 ಮಂದಿ ಇತರರಿದ್ದು, 8 ಮಂದಿ ಮಾತ್ರ (ಶೇ 6.20) ಮತ ಚಲಾಯಿಸಿದ್ದಾರೆ.

ಪರಿಣಾಮ ಬೀರದ ಸ್ವೀಪ್‌: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಸ್ವೀಪ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಜಾಗೃತಿ ಜಾಥಾ, ಬೀದಿ ನಾಟಕಗಳು, ಕವಿಗೋಷ್ಠಿ ಹೀಗೆ ನಾನಾ ತರಹದ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿತ್ತು. ಆದರೆ ಪರಿಣಾಮ ಮತ ಪ್ರಮಾಣ ಹೆಚ್ಚಿಸುವಲ್ಲಿ ಕಂಡು ಬಂದಿಲ್ಲ. ಆದರೆ ಇಳಿಕೆಯಾಗುವುದನ್ನಷ್ಟೇ ತಡೆದಿದೆ. ಕಳೆದ ಬಾರಿ ಶೇ 73.20 ಮತದಾನವಾಗಿದ್ದರೆ ಈ ಬಾರಿ ಅದರ ಹತ್ತಿರದಲ್ಲಿಯೇ (ಶೇ 73.03) ಮತ ಚಲಾವಣೆಯಾಗಿದೆ.

ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ತುಸು ಅಧಿಕ ಮತದಾನವಾಗಿದ್ದರೆ, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಹರಿಹರ (ಶೇ 2.18), ಹೊನ್ನಾಳಿ (ಶೇ 1.19), ದಾವಣಗೆರೆ ಉತ್ತರ (ಶೇ 0.48) ಮತ್ತು ದಾವಣಗೆರೆ ದಕ್ಷಿಣ (ಶೇ 0.33) ಮತಗಳಿಕೆಯಲ್ಲಿ ಹೆಚ್ಚಳ ಕಂಡ ಕ್ಷೇತ್ರಗಳಾಗಿವೆ. ಚನ್ನಗಿರಿ (ಶೇ 3.44), ಜಗಳೂರು (ಶೇ 1.31), ಮಾಯಕೊಂಡ (ಶೇ 0.45) ಹಾಗೂ ಹರಪನಹಳ್ಳಿ (ಶೇ 0.11) ಮತ ಚಲಾವಣೆಯಲ್ಲಿ ಇಳಿಕೆ ಕಂಡ ಕ್ಷೇತ್ರಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT