ಬಸವಾಪಟ್ಟಣ: ಇಲ್ಲಿನ ಭದ್ರಾ ನಾಲೆಯ ಪಕ್ಕದಲ್ಲಿ ಹರಿಯುವ ಹಳ್ಳಕ್ಕೆ ಹೊಸ ಸೇತುವೆ ನಿರ್ಮಿಸಿ ಎಂಬ ಇಲ್ಲಿನ ರೈತರ ಮನವಿಗೆ ಸರ್ಕಾರ ಸ್ಪಂದಿಸದೇ ಇರುವುದರಿಂದ ಈ ವರ್ಷದ ಮಳೆಗಾಲದಲ್ಲಿಯೂ ತೊಂದರೆ ಅನುಭವಿಸಬೇಕಿದೆ.

ಹಲವು ವರ್ಷಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಹಳ್ಳದ ನೀರು ಎರಡು ತಿಂಗಳ ಕಾಲ ತುಂಬಿ ಹರಿದು ಜನ, ಜಾನುವಾರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಳ್ಳಕ್ಕೆ ಎತ್ತರದಲ್ಲಿ ಸುಭದ್ರ ಸೇತುವೆ ನಿರ್ಮಿಸಿ ಎಂದು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ.

‘ನೀರಾವರಿ ಇಲಾಖೆಯವರು ಅಂದಾಜು 70 ವರ್ಷಗಳ ಹಿಂದೆ ಈ ಹಳ್ಳದ ರಸ್ತೆಗೆ ಎರಡು ಸಿಮೆಂಟ್ ಪೈಪ್ಗಳನ್ನು ಹಾಕಿ ನೆಲ ಮಟ್ಟಕ್ಕೆ ಒಂದು ಸೇತುವೆ ನಿರ್ಮಿಸಿದ್ದರು. ರಸ್ತೆಗೆ ಎರಡು ಅಡಿ ಅಗಲ ಮತ್ತು ಎಂಟು ಅಡಿ ಉದ್ದದ ಎರಡು ಕಲ್ಲುಗಳನ್ನು ಜೋಡಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದರು. ಆದರೆ, ಮಳೆಗಾಲದಲ್ಲಿ ಹಳ್ಳ ತುಂಬಿ ರಸ್ತೆಯ ಮೇಲೆ ನೀರು ರಭಸವಾಗಿ ಹರಿಯುವುದರಿಂದ ಜನ ಜಾನುವಾರುಗಳು ಹಳ್ಳ ದಾಟುವುದು ಕಷ್ಟವಾಗುತ್ತಿದೆ. ಜನ, ಜಾನುವಾರು ಮತ್ತು ವಾಹನಗಳ ದಟ್ಟಣೆಯಲ್ಲಿ ಇಲ್ಲಿನ ಸೇತುವೆ ಜೀರ್ಣವಾಗುವುದರೊಂದಿಗೆ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಶಾಸಕರೂ ಸೇರಿ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ಇಲ್ಲಿನ ರೈತ ಹಾಲಸಿದ್ದಪ್ಪ.

‘ಈ ಹಳ್ಳದ ರಸ್ತೆಯ ಮೇಲ್ಭಾಗದಲ್ಲಿ ವೃದ್ಧಾಶ್ರಮವಿದ್ದು, ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವಾಗ ಅಂದಾಜು ಮೂರು ತಿಂಗಳು ಇಲ್ಲಿನ ರಸ್ತೆ ಬಂದ್ ಆಗಿ ಹರೋಸಾಗರದ ಮೂಲಕ ನಾಲ್ಕು ಕಿ.ಮೀ. ಸುತ್ತಿಕೊಂಡು ಹೋಗುವ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನಗಳು ಹಳ್ಳದಲ್ಲಿ ಕೊಚ್ಚಿ ಹೋಗುತ್ತಿವೆ. ಸರ್ಕಾರ ಈಗಲಾದರೂ ಈ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು’ ಎನ್ನುತ್ತಾರೆ ವೃದ್ಧಾಶ್ರಮದ ಸಂಚಾಲಕ ಎಚ್.ಟಿ.ಗುರುಮೂರ್ತಿ.

‘ಪ್ರತಿದಿನ ಈ ಹಳ್ಳದ ರಸ್ತೆಯ ಮೂಲಕ ವೃದ್ಧರು, ಆಸ್ಪತ್ರೆ, ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ಹೋಗಬೇಕಿದೆ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ನಮ್ಮಂತಹ ವೃದ್ಧರಿಗೆ ಜೀವ ಭಯ ಉಂಟಾಗಿದೆ’ ಎನ್ನುತ್ತಾರೆ ಇಲ್ಲಿನ ಸಿದ್ಧಾರೂಢ ವೃದ್ಧಾಶ್ರಮದ ನಿವಾಸಿಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-43-2140350628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.