ಬಸವಾಪಟ್ಟಣ: ಶನಿವಾರ ಸಂಜೆ ಬೀಸಿದ ಭಾರೀ ಗಾಳಿಗೆ ಅಪಾರ ಪ್ರಮಾಣದ ಅಡಿಕೆ ಮರಗಳು ನೆಲಕ್ಕುರುಳಿದ್ದು, ಚಾವಣಿಗೆ ಹೊದಿಸಿದ್ದ ಶೀಟ್ಗಳು ಹಾರಿಹೋಗಿವೆ.

ರೈತ ಎಂ.ಜಿ.ರುದ್ರೇಶ್ ಅವರ ಅಡಿಕೆ ತೋಟದಲ್ಲಿ ಸಾವಿರಾರು ಅಡಿಕೆ ಮರಗಳು ನೆಲಕ್ಕೆ ಬಿದ್ದಿವೆ. ‘25 ವರ್ಷಗಳ ಹಿಂದೆ ಫಲಕ್ಕೆ ಬಂದಿದ್ದ ಅಡಿಕೆ ಮರಗಳ ಪೈಕಿ ಸಾಕಷ್ಟು ನೆಲಕ್ಕೆ ಬಿದ್ದು, ಅಪಾರ ನಷ್ಟವಾಗಿದೆ’ ಎಂದು ರುದ್ರೇಶ್ ತಿಳಿಸಿದರು. ಪಾರವ್ವರ ಬಸವರಾಜ್ ಹಾಗೂ ಪಾರವ್ವರ ನಾಗರಾಜ್ ಅವರ ತೋಟದಲ್ಲೂ ಸಾಕಷ್ಟು ಹಾನಿ ಸಂಭವಿಸಿದೆ.

ಇಲ್ಲಿನ ಬೆಟ್ಟದ ಮೇಲಿರುವ ದುರ್ಗಾದೇವಿ ದೇವಾಲಯದ ಮೇಲೆ ಹೊದಿಸಲಾಗಿದ್ದ ಶೀಟ್ಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ. ದುರ್ಗಾದೇವಿಯ ಕೆಳಗಿನ ದೇವಾಲಯದ ಚಾವಣಿ ಹಾರಿ ಕೆಳಗೆ ಬಿದ್ದಿದೆ. ಶೃಂಗಾರ್ಬಾಗ್ ತಾಂಡಾದ ಮಾಲತಿ ಬಾಯಿ, ನೂರ್ಯಾನಾಯ್ಕ ಎಂಬವರ ಮನೆಗಳ ಮೇಲೆ ಮರಗಳು ಬಿದ್ದು, ಮನೆಗಳಿಗೆ ಹಾನಿಯಾಗಿದೆ. ತಾಂಡಾ ರಸ್ತೆಯಲ್ಲಿ ಐದು ವಿದ್ಯುತ್ ಕಂಬಗಳು ಉರುಳಿ ಬಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಬಸವಾಪಟ್ಟಣ ಸಮೀಪದಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ.

ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿ, ನಷ್ಟಕ್ಕೊಳಗಾದ ರೈತರಿಗೆ ಮತ್ತು ಗ್ರಾಮಸ್ಥರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-43-617495728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.