ಬಸವಾಪಟ್ಟಣ: ಅಡುಗೆ ಮನೆಯಲ್ಲಿ ತನ್ನದೇ ಆದ ಸಾಮ್ರಾಜ್ಯ ಸ್ಥಾಪಿಸಿಕೊಂಡಿರುವ ಎಲ್.ಪಿ.ಜಿ. ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಸಮಸ್ಯೆಯಿಂದ ಗ್ರಾಮೀಣ ಗ್ರಾಹಕರ ನೆಮ್ಮದಿ ಕೆಡಿಸಿದೆ.

20 ದಿನಗಳಿಂದ ಅಡುಗೆ ಸಿಲಿಂಡರ್ ಸಿಗದೇ ಒದ್ದಾಡುತ್ತಿದ್ದ ಕಣಿವೆಬಿಳಚಿ ಗ್ರಾಮಕ್ಕೆ ಚನ್ನಗಿರಿಯಿಂದ 200 ಇಂಡೇನ್ ಗ್ಯಾಸ್ ಸಿಲಿಂಡರ್ಗಳನ್ನು ತುಂಬಿದ ಎರಡು ವಾಹನಗಳು ಬಂದಿದ್ದವು. ಆ ವೇಳೆಗೆ ಇಲ್ಲಿನ ಛತ್ರಪತಿ ಶಿವಾಜಿ ವೃತ್ತದಲ್ಲಿ ನೂರಾರು ಗ್ರಾಹಕರು ಖಾಲಿ ಸಿಲಿಂಡರ್ಗಳೊಂದಿಗೆ ಕಾಯುತ್ತಿದ್ದರು.

ವಾಹನಗಳು ಬಂದೊಡನೆ ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್ಗಳನ್ನು ಪಡೆಯಲು ಗ್ರಾಹಕು ಮುಂದಾದರೂ ನೆಟ್ವರ್ಕ್ ಸಮಸ್ಯೆಯಿಂದ ಒ.ಟಿ.ಪಿ. ಬಾರದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಖಾಲಿ ಸಿಲಿಂಡರ್ಗಳೊಂದಿಗೆ ಹಿಂತಿರುಗಿದರು.

‘ನೂರಕ್ಕೂ ಹೆಚ್ಚು ಸಿಲಿಂಡರ್ಗಳನ್ನು ತಂದಿದ್ದ ವಿತರಕರು ವಾಪಸ್ ತೆಗೆದುಕೊಂಡು ಹೋದರು. ನಮ್ಮ ಗ್ರಾಮದಲ್ಲಿ 500ಕ್ಕೂ ಹೆಚ್ಚು ಸಿಲಿಂಡರ್ ಬಳಕೆದಾರರಿದ್ದು, ಸಿಲಿಂಡರ್ಗಳಿಗಾಗಿ ಪರದಾಡುವಂತಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್.ಅಣ್ಣೋಜಿರಾವ್ ಹೇಳಿದರು.

‘ಗ್ಯಾಸ್ ಸಿಲಿಂಡರ್ಗಳನ್ನು ನಂಬಿ ಸಾಂಪ್ರದಾಯಿಕ ಕಟ್ಟಿಗೆ ಒಲೆಗಳ ಉಪಯೋಗವನ್ನು ನಿಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಈಗ ಧುತ್ತೆಂದು ಸಿಲಿಂಡರ್ಗಳ ಅಭಾವ ಉಂಟಾಗಿ ನಮಗೆ ಅಡುಗೆ ಮಾಡಲು ಇಂಧನ ಇಲ್ಲದಂತಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಗ್ರಾಮದ ಮಹಿಳೆಯರಾದ ಸುಮಿತ್ರಮ್ಮ, ಗೀತಾಬಾಯಿ ಮತ್ತು ಪಾರ್ವತಿಬಾಯಿ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-43-1488498722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.