ಬಸವಾಪಟ್ಟಣ: ನಿತ್ಯದ ಅಡುಗೆಗೆ ಅವಲಂಬಿಸಿರುವ ಎಲ್.ಪಿ.ಜಿ. ಸಿಲಿಂಡರ್ ಗಳಿಗಾಗಿ ಇಲ್ಲಿನ ಗ್ರಾಹಕರು ಹದಿನೈದು ದಿನಗಳಿಂದ ಪರದಾಡುತ್ತಿದ್ದಾರೆ.

‘ಸಿಲಿಂಡರ್ಗಳ ವಿತರಣೆ ಬಗ್ಗೆ ಮಾಹಿತಿ ಇಲ್ಲದೇ ಎರಡುವಾರದಿಂದ ತೊಂದರೆಗೊಳಗಾಗಿದ್ದೇವೆ. ಎಲ್.ಪಿ.ಜಿ. ನಂಬಿಕೊಂಡು ಬೇರೆ ಇಂಧನ ಒಲೆಗಳ ಬಳಕೆಯನ್ನು ಬಿಟ್ಟು ಈಗ ಪರದಾಡುವಂತಾಗಿದೆ. ಸಿಲಿಂಡರ್ಗಳ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ತಾಲ್ಲೂಕು ಅಥವಾ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು. ಆಗ ಪರ್ಯಾಯ ವ್ಯವಸ್ಥೆಗೆ ಗ್ರಾಹಕರು ಚಿಂತನೆ ನಡೆಸಬಹುದು’ ಎಂದು ಗ್ರಾಮಸ್ಥರಾದ ಬಿ.ಹಾಲೇಶಪ್ಪ, ಕೆ.ನಾಗರಾಜ್, ಎಂ.ರವಿಕುಮಾರ್ ಹೇಳಿದರು.

‘ತಾಲ್ಲೂಕು ಕೇಂದ್ರದ ಎಲ್.ಪಿ.ಜಿ. ಸಿಲಿಂಡರ್ ವಿತರಕರು ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ನಾವು ಖಾಲಿ ಸಿಲಿಂಡರ್ಗಳನ್ನು ಚನ್ನಗಿರಿಯ ವಿತರಣಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಿದ್ದೆವು. ಆದರೆ ನಿಮ್ಮ ಗ್ರಾಮಕ್ಕೆ ನಾವೇ ಬಂದು ವಿತರಿಸುತ್ತೇವೆ ಎಂದು ನಮ್ಮನ್ನು ಸಮಾಧಾನ ಮಾಡಿ ಕಳಿಸಿದರು. ಈಗ ಎಲ್ಲ ರೀತಿಯ ಮಾಹಿತಿಗಳು ಸಾರ್ವಜನಿಕರ ಮೊಬೈಲ್ ಫೋನ್ಗಳಿಗೆ ಬರುತ್ತಿವೆ. ಅದರಂತೆ ಗ್ರಾಹಕರಿಗೆ ಎಷ್ಟು ದಿನಕ್ಕೊಮ್ಮೆ ಸಿಲಿಂಡರ್ ವಿತರಿಸಲಾಗುತ್ತದೆ. ಯಾವ ದಿನ ಮತ್ತು ಯಾವ ವೇಳೆಗೆ ಎಂಬ ಮಾಹಿತಿ ನೀಡಬೇಕು. ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಇಡೀ ದಿನ ಒಂದು ಸಿಲಿಂಡರ್ಗಾಗಿ ಕಾಯುವಂತಾಗಿದೆ. ನಮ್ಮಂತಹ ಕೂಲಿಕಾರರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಸೇರಿ ಎಲ್ಲ ವರ್ಗದ ಜನರಿಗೂ ತುಂಬಾ ತೊಂದರೆಯಾಗುತ್ತಿದೆ’ ಎಂದು ಗ್ರಾಹಕರಾದ ಜಿ.ಕಮಲಮ್ಮ, ಕೆ.ಎಂ.ಬಸವರಾಜಪ್ಪ, ಸುಜಾತಮ್ಮ, ಇಮ್ರಾನ್ ತಿಳಿಸಿದರು.

ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಚನ್ನಗಿರಿಯಿಂದ ಬಂದ ವಾಹನಗಳಲ್ಲಿ ಅಂದಾಜು 150 ಗ್ರಾಹಕರಿಗೆ ಸಿಲಿಂಡರ್ಗಳನ್ನು ವಿತರಿಸಲಾಯಿತು.

‘ಮುಂದಿನ ಒಂದೆರಡು ವಾರಗಳಲ್ಲಿ ಸಿಲಿಂಡರ್ ವಿತರಣಾ ವ್ಯವಸ್ಥೆ ಸರಿಯಾಗುತ್ತದೆ. ಈಗಾಗಲೇ ನಮ್ಮ ಕೇಂದ್ರದಲ್ಲಿ ನೋಂದಾಯಿಸಿರುವ 7,000 ಗ್ರಾಹಕರಿಗೆ ಹಂತ ಹಂತವಾಗಿ ಸಿಲಿಂಡರ್ಗಳನ್ನು ಒದಗಿಸಲಾಗುತ್ತದೆ. ಯಾರೂ ಚನ್ನಗಿರಿಗೆ ಸಿಲಿಂಡರ್ಗಳನ್ನು ತೆಗೆದುಕೊಂಡು ಬರಬೇಡಿ’ ಎಂದು ವಿತರಕರೊಬ್ಬರು ವಿಡಿಯೊ ಸಂದೇಶವನ್ನು ರವಾನಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-43-1992648493

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.