ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ದಾಳಿಗೆ ಮತ್ತೆ ಐವರು ನಾಗರಿಕರ ಬಲಿ

Last Updated 23 ಮೇ 2018, 20:10 IST
ಅಕ್ಷರ ಗಾತ್ರ

ಜಮ್ಮು : ಜಮ್ಮು ಮತ್ತು ಕಾಶ್ಮೀರದ ಜಮ್ಮು, ಕಠುವಾ ಮತ್ತು ಸಾಂಬಾ ಜಿಲ್ಲೆಗಳ ಗ್ರಾಮಗಳ ಮೇಲೆ ಪಾಕಿಸ್ತಾನದ ಯೋಧರು ಬುಧವಾರ ನಡೆಸಿದ ದಾಳಿಯಲ್ಲಿ ಐವರು ನಾಗರಿಕರು ಮೃತಪಟ್ಟಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನವು ಒಂಬತ್ತು ದಿನಗಳಿಂದ ನಿರಂತರವಾಗಿ ಗಡಿ ಹಳ್ಳಿಗಳ ಮೇಲೆ ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ 15 ಜನ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಎಂಟು ತಿಂಗಳ ಮಗು ಮತ್ತು ಒಬ್ಬ ಯೋಧ ಮೃತಪಟ್ಟಿದ್ದಾರೆ.

ಊರುಬಿಟ್ಟ 80 ಸಾವಿರ ಭಾರತೀಯರು

ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಭಾರತದ 100ಕ್ಕೂ ಹೆಚ್ಚು ಗ್ರಾಮಗಳು ಮತ್ತು ಹಲವು ಪಟ್ಟಣಗಳ ಜನರು ಪಾಕಿಸ್ತಾನದ ಗುಂಡು ಮತ್ತು ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಊರು ಬಿಟ್ಟಿದ್ದಾರೆ.

‘ಈ ಎಲ್ಲಾ ಗ್ರಾಮ ಮತ್ತು ಪಟ್ಟಣಗಳ ಜನಸಂಖ್ಯೆ ಸುಮಾರು 80,000 ಎಂದು ಅಂದಾಜಿಸಲಾಗಿದೆ. ಅವರಲ್ಲಿ ಬಹುತೇಕರು ತಮ್ಮ ಊರನ್ನು ತೊರೆದಿದ್ದಾರೆ. ಹಲವರು ಸುರಕ್ಷಿತ ಪ್ರದೇಶಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದರೆ, ಸರ್ಕಾರದ ವತಿಯಿಂದ ಆರಂಭಿಸಿರುವ ಶಿಬಿರಗಳಲ್ಲಿ ಕೆಲವರು ಆಶ್ರಯ ಪಡೆದಿದ್ದಾರೆ’ ಎಂದು ಜಮ್ಮು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

‘ಈ ಊರುಗಳೆಲ್ಲವೂ ಖಾಲಿಯಾಗಿವೆ. ಗುಂಡು ಮತ್ತು ಶೆಲ್ ದಾಳಿಯಲ್ಲಿ ಬಹುತೇಕ ಎಲ್ಲ ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ ಊರುಗಳೆಲ್ಲವೂ ಪಾಳು ಬಿದ್ದಿರುವಂತೆ ಕಾಣಿಸುತ್ತಿವೆ. ಕಳ್ಳರಿಂದ ಮನೆಗಳನ್ನು ರಕ್ಷಿಸಿಕೊಳ್ಳಲು ಕೆಲವರು ಊರಿನಲ್ಲಿ ಉಳಿದಿದ್ದಾರೆ. ಅಂತಹವರನ್ನೂ ಅಲ್ಲಿಂದ ತೆರವು ಮಾಡಿಸುವ ಕೆಲಸ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಸೇನೆ ಮತ್ತು ಗಡಿ ಭದ್ರತಾ ಪಡೆ ಸಿಬ್ಬಂದಿ ತಮ್ಮ ಗುಂಡು ನಿರೋಧಕ ವಾಹನಗಳಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT