ಬಸವಾಪಟ್ಟಣ:14 ವರ್ಷಗಳಿಂದ ಇಲ್ಲಿನ ನೀರಾವರಿ ಇಲಾಖೆಯ ಶಿಥಿಲ ಕಟ್ಟಡದಲ್ಲಿ ನಡೆಯುತ್ತಿರುವ ನಾಡ ಕಚೇರಿಗೆ ಪ್ರತ್ಯೇಕವಾಗಿ ಹೊಸ ಕಟ್ಟಡವನ್ನು ಶೀಘ್ರವೇ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

2012ರಲ್ಲಿ ಕಂದಾಯ ಇಲಾಖೆಯು ನಾಡ ಕಚೇರಿ ಮಂಜೂರು ಮಾಡಿದಾಗ, ಸೂಕ್ತ ಕಟ್ಟಡ ದೊರೆತಿರಲಿಲ್ಲ. ಆದ್ದರಿಂದ ನೀರಾವರಿ ಇಲಾಖೆಗೆ ಸೇರಿದ, 70 ವರ್ಷಗಳಷ್ಟು ಹಳೆಯದಾದ ಸಿಬ್ಬಂದಿ ವಸತಿ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಚೇರಿ ಆರಂಭಿಸಲಾಯಿತು.

‘ರಾಜ್ಯದಲ್ಲಿರುವ 150 ನಾಡಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಇದರಲ್ಲಿ ಬಸವಾಪಟ್ಟಣದ ನಾಡಕಚೇರಿಯೂ ಸೇರಿದೆ. ಆದರೆ ಈವರೆಗೆ ಯಾವುದೇ ಕೆಲಸಗಳು ಆಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹೇಳಿದ್ದಾರೆ.

‘ಈಗಿನ ಕಟ್ಟಡ ಹಳೆಯದಾಗಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಒಂದು ಕಟ್ಟಡದಲ್ಲಿ ಕಂಪ್ಯೂಟರ್ ಕೊಠಡಿ, ಉಪತಹಶೀಲ್ದಾರ್ ಕೊಠಡಿ ಇದ್ದು, ಆರ್.ಐ. ಮತ್ತು ಗ್ರಾಮ ಲೆಕ್ಕಿಗರ ಕಚೇರಿಗಳು ಪಕ್ಕದಲ್ಲಿರುವ ಹಳೆಯದಾದ ಚಿಕ್ಕ ಕಟ್ಟಡದಲ್ಲಿ ನಡೆಯುತ್ತಿವೆ. ಮಳೆ ಹೆಚ್ಚಾದರೆ ಕಟ್ಟಡ ಕುಸಿಯುವ ಸಂಭವವಿದೆ’ ಎಂದು ಕಚೇರಿಗೆ ಬರುವ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.

ನೂತನ ಕಟ್ಟಡಕ್ಕೆ ಇಲ್ಲಿನ ಗ್ರಾಮ ಲೆಕ್ಕಿಗರ ಹಳೆಯ ವಸತಿ ನಿವೇಶನವನ್ನು ಆಯ್ಕೆ ಮಾಡಿದ್ದು, ಹೌಸಿಂಗ್ ಬೋರ್ಡ್ ಕಡೆಯಿಂದ 35x65 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ತಾಲ್ಲೂಕು ಮೋಜಿಣಿದಾರರಿಂದ ಸರ್ವೆ ನಡೆದಿದೆ. ಆದರೆ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ.

ಕೂಡಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿ.ಆರ್.ಹಾಲೇಶ್, ಬಿ.ಜಿ.ಸಚಿನ್, ಸೈಯದ್ ರಫೀಕ್, ಮಾಜಿ ಉಪಾಧ್ಯಕ್ಷೆ ಕುಸುಮಾ ಬಸವರಾಜಪ್ಪ, ಸದಸ್ಯರಾದ ಎಂ.ಎಸ್.ರಮೇಶ್, ಸಿ.ಮಂಜುನಾಥ್, ಪಿ.ಅತಾವುಲ್ಲಾ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-43-611818249

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.