ಬಸವಾಪಟ್ಟಣ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯ ಲಾಭ ಬಸವಾಪಟ್ಟಣ ಭಾಗದ ಮಹಿಳೆಯರಿಗೆ ಸಿಗದಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ 21 ಹಳ್ಳಿಗಳಿದ್ದು, ಜಿಲ್ಲಾ ಕೇಂದ್ರಕ್ಕೆ ತೆರಳಲು ಕೆಎಸ್ಆರ್ಟಿಸಿ ಬಸ್ ಸೌಕರ್ಯವೇ ಇಲ್ಲದಂತಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನ ಪಟ್ಟಣ ಹಾಗೂ ಜಿಲ್ಲಾ ಕೇಂದ್ರಕ್ಕೆ ಹೋಗಲು ಇನ್ನಿಲ್ಲದ ಕಷ್ಟ ಅನುಭವಿಸುವಂತಾಗಿದೆ.

ಉತ್ತಮ ರಸ್ತೆಗಳು ಇದ್ದರೂ ನಮ್ಮ ಭಾಗಕ್ಕೆ ಸರ್ಕಾರಿ ಬಸ್ ಇಲ್ಲದಂತಾಗಿದೆ. ಆದ್ದರಿಂದ ಬೇರೆ ದಾರಿ ಇಲ್ಲದೆ ಖಾಸಗಿ ಬಸ್ಗಳನ್ನೇ ಅವಲಂಬಿಸಬೇಕಾಗಿದೆ. ಇರುವ ಒಂದು ಬಸ್ ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂದು ನಾಗರಿಕರು ದೂರಿದರು.

ಇರುವ ಒಂದು ಬಸ್ ದಾವಣಗೆರೆ–ಹೊನ್ನಾಳಿ ಮಾರ್ಗಕ್ಕೆ ಸೀಮಿತವಾಗಿದೆ. ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಶುಕ್ರವಾರ ಅಪಘಾತಕ್ಕೀಡಾಗಿದೆ. ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ ಕೆಎಸ್ಆರ್ಟಿಸಿ ಡಿಪೊ ಇದ್ದರೂ ಈ ಭಾಗದ ಜನತೆ ಖಾಸಗಿ ಬಸ್ಗಳನ್ನೇ ಅವಲಂಬಿಸಬೇಕಾಗಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ಭಾಗದಲ್ಲಿ ಸರ್ಕಾರಿ ಬಸ್ಗಳನ್ನು ಓಡಿಸುತ್ತಿಲ್ಲ. ಇದರಿಂದ ಸರ್ಕಾರದ ಯೋಜನೆಯ ಲಾಭ ನಮಗೆ ಸಿಗುತ್ತಿಲ್ಲ. ಇದು ಸಾರಿಗೆ ಸಂಸ್ಥೆ ಅಧಿಕಾರಿ ಗಳ ತಾತ್ಸಾರವೋ, ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಗೊತ್ತಾಗುತ್ತಿಲ್ಲ’ ಎಂದು ಪಟ್ಟಣದ ನಾಗರತ್ನಮ್ಮ, ಶಾರದಮ್ಮ, ಅನ್ನಪೂರ್ಣಮ್ಮ ಬೇಸರಿಸಿದರು.

ಹೊನ್ನಾಳಿ ಡಿಪೊದಿಂದ ಧರ್ಮಸ್ಥಳ, ಉಡುಪಿ, ಸುಬ್ರಹ್ಮಣ್ಯಕ್ಕೆ ಬಸ್ ಓಡಿಸುತ್ತಿದ್ದು, ಅವು ಹೊನ್ನಾಳಿ, ಬಸವಾಪಟ್ಟಣ, ಚನ್ನಗಿರಿ, ಬೀರೂರು ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಇದೇ ಮಾರ್ಗದಲ್ಲಿ ಬೆಂಗಳೂರು, ಮೈಸೂರಿಗೂ ಬಸ್ಗಳನ್ನು ಓಡಿಸಬ ಹುದು. ಚನ್ನಗಿರಿ ಡಿಪೊದಿಂದ ಸೂಳೆಕೆರೆ, ಬಸವಾಪಟ್ಟಣ, ಮಲೇಬೆನ್ನೂರು, ಹರಿಹರ ಮಾರ್ಗವಾಗಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೂ ಹಾಗೂ ಇದೇ ಮಾರ್ಗದಲ್ಲಿ ಹರಿಹರದ ಮೂಲಕ ಹರಪನಹಳ್ಳಿ, ಹೊಸಪೇಟೆ, ಮಂತ್ರಾಲಯಗಳಿಗೂ ಬಸ್ಗಳನ್ನು ಓಡಿಸಲು ಅವಕಾಶವಿದೆ. ಆದರೆ ಸಾರಿಗೆ ಸಂಸ್ಥೆಯವರು ಇದಕ್ಕೆ ಮುಂದಾ ಗದಿರುವುದು ಏಕೆ’ ಎಂದು ಸ್ಥಳೀಯರು ಪ್ರಶ್ನಿಸಿದರು.

‘ಬಸವಾಪಟ್ಟಣ ಭಾಗದ ಜನ ಸಾರಿಗೆ ಸಂಸ್ಥೆ ಬಸ್ ಏರಬೇಕಾದರೆ ಶಿವಮೊಗ್ಗ ಅಥವಾ ಹೊನ್ನಾಳಿಗೆ ಹೋಗಬೇಕು. ಬೆಂಗಳೂರಿನ ಬಸ್ಗಳಿಗಾಗಿ ದಾವಣಗೆರೆಗೆ ಹೋಗಬೇಕು. ಲಗೇಜ್ ಹಿಡಿದುಕೊಂಡು ಕಿಕ್ಕಿರಿದು ತುಂಬಿರುವ ಬಸ್ಗಳನ್ನು ಮಹಿಳೆಯರು ಹತ್ತುವುದಾದರೂ ಹೇಗೆ. ನಮ್ಮ ಭಾಗದಿಂದ ಬೇರೆ ಬೇರೆ ಸ್ಥಳಗಳಿಗೆ ನಿತ್ಯ ನೂರಾರು ಜನ ಪ್ರಯಾಣಿಸುತ್ತಾರೆ. ಅವರೆಲ್ಲರಿಗೂ ಅನುಕೂಲ ಕಲ್ಪಿಸಲು ಸರ್ಕಾರದ ಪ್ರತಿನಿಧಿಗಳಿಗೆ ಮನಸ್ಸಿಲ್ಲವೇ? ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಶಾಸಕರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಶಶಿಕಲಾ ಮತ್ತು ಶಿವಮ್ಮ ಒತ್ತಾಯಿಸಿದರು.

‘ಹೊನ್ನಾಳಿ– ದಾವಣಗೆರೆ ಮಾರ್ಗದಲ್ಲಿ ಈಗ ಇರುವ ಒಂದೇ ಬಸ್ಸಿನ ಬದಲಾಗಿ ಐದಾರು ಬಸ್ಗಳನ್ನು ನಿರಂತರವಾಗಿ ಓಡಿಸಿದರೆ ಜನರಿಗೆ ಅನುಕೂಲವಾಗಲಿದೆ. ಪ್ರಯಾಣಿಕರ ದಟ್ಟಣೆಯೂ ಕಡಿಮೆಯಾಗಲಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಆರ್. ಹಾಲೇಶ್ ಮತ್ತು ಬಿ.ಜಿ.ಸಚಿನ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-43-627398762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.