ಬಸವಾಪಟ್ಟಣ: ಬೇಸಿಗೆ ಅವಧಿಯಲ್ಲಿ (ಏಪ್ರಿಲ್, ಮೇ) ತರಕಾರಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಈ ವರ್ಷ ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚಿದ್ದರಿಂದ ತರಕಾರಿ ಉತ್ಪಾದನೆಯೂ ಕುಂಠಿತಗೊಂಡಿದ್ದು, ಬಹುತೇಕ ತರಕಾರಿಗಳ ಬೆಲೆ ಗಗನಮುಖಿಯಾಗಿವೆ.

ಬಿಸಿಲೇರುತ್ತಿದ್ದರೂ ಮದುವೆ, ಮುಂಜಿಗಳ ಸಂಖ್ಯೆಯೂ ಹೆಚ್ಚುತ್ತಲಿದೆ. ಸಾಲು ಸಾಲು ಜಾತ್ರೆ, ಸಭೆ, ಸಮಾರಂಭಗಳಿಗೆ ನೆಂಟರಿಷ್ಟರು ಮನೆಗೆ ಬರುವುದು ಸಹಜ. ಈ ಸಂದರ್ಭದಲ್ಲಿ ಬೆಲೆ ಎಷ್ಟೇ ಏರಿಕೆಯಾದರೂ ತರಕಾರಿ ಕೊಳ್ಳಲೇಬೇಕಾದ ಅನಿವಾರ್ಯತೆಯೂ ಇದ್ದು, ಬೇಡಿಕೆ ಹೆಚ್ಚಿದೆ. ಇದೂ ಬೆಲೆ ಏರಿಕೆಗೆ ಕಾರಣವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಪ್ರತಿ ಕೆ.ಜಿ. ಬೀನ್ಸ್ ₹ 200, ಬೆಂಡೆಕಾಯಿ ₹ 80, ಚವಳಿಕಾಯಿ ₹ 80, ಸೌತೆಕಾಯಿ ₹ 70, ನವಿಲುಕೋಸು ₹ 80, ನುಗ್ಗೆಕಾಯಿ ₹ 100, ಹಸಿ ಮೆಣಸಿನಕಾಯಿ ₹ 80, ಬದನೆಕಾಯಿ ₹ 50, ಟೊಮೆಟೊ ₹ 50, ಬೀಟ್ರೂಟ್ ₹ 60ಕ್ಕೆ, ಕರಿಬೇವು, ಕೊತ್ತಂಬರಿ ಚಿಕ್ಕ ಕಟ್ಟಿಗೆ ₹ 10 ಇದ್ದು, ವಿವಿಧ ಬಗೆಯ ಸೊಪ್ಪುಗಳು ಒಂದು ಕಟ್ಟಿಗೆ ₹ 20ದಂತೆ ಮಾರಾಟವಾಗುತ್ತಿವೆ.

‘ನೀರಿನ ಕೊರತೆ, ಕೃಷಿ ಕಾರ್ಮಿಕರ ಕೊರತೆಯಿಂದ ತರಕಾರಿ ಉತ್ಪಾದನೆ ಬೇಸಿಗೆಯಲ್ಲಿ ಕುಂಠಿತವಾಗಿದೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ನಿಂಬೆಹಣ್ಣಿನ ಇಳುವರಿ ಕಡಿಮೆಯಾಗಿದ್ದು, ಅದರ ದರವೂ ಹೆಚ್ಚಿದೆ’ ಎಂದು ರೈತರು ಹೇಳಿದರು.

‘ಹಿಂದೆ ಮನೆಯ ಮುಂದೆ, ಹಿತ್ತಿಲಲ್ಲಿ ಸಾರ್ವಜನಿಕರು ಮತ್ತು ಹೊಲಗಳಲ್ಲಿ ರೈತರು ತರಕಾರಿ ಬೆಳೆದುಕೊಳ್ಳುತ್ತಿದ್ದರು. ಆದರೆ, ಈಗ ಆ ವಾತಾವರಣವಿಲ್ಲ. ಎಲ್ಲರೂ ಹಣ ಕೊಟ್ಟು ಕೊಳ್ಳುವವರೇ ಆಗಿರುವುದರಿಂದ ಈ ಬೆಲೆ ಏರಿಕೆ ಆಗಿದೆ’ ಎಂದು ಶಕುಂತಲಮ್ಮ ಮತ್ತು ಸುಶೀಲಮ್ಮ ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-43-1446398743

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.