ಮಂಗಳವಾರ, ಡಿಸೆಂಬರ್ 1, 2020
19 °C

ಡಿ.13ರಂದು ಸೌಂದರ್ಯ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ಒನ್ ಬೆಸ್ಟ್ ಮೂವ್‌ಮೆಂಟ್ ಈವೆಂಟ್ಸ್ ಸಂಸ್ಥೆ ಹಾಗೂ ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ 13ರಂದು ಸೌಂದರ್ಯ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯು ಮಕ್ಕಳು, ‘ಮಿಸ್‌’ ಹಾಗೂ ‘ಮಿಸೆಸ್’ ವಿಭಾಗಗಳಲ್ಲಿ ನಡೆಯುತ್ತಿದ್ದು, ವಯಸ್ಸಿಗೆ ಅನುಗುಣವಾಗಿ ಏಳು ವಿಭಾಗಳಾಗಿ ವಿಂಗಡಿಸಲಾಗಿದೆ. ಆನ್‌ಲೈನ್ ಮೂಲಕ ಆಡಿಷನ್ ನಡೆಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಮೇಘಾ ಕೆ.ಸಿ. ಭಾನುವಾರ ಪತ್ರಿಕಾಗೋಷ್ಠಿಯ‌ಲ್ಲಿ ತಿಳಿಸಿದರು.

‘ಸೌಂದರ್ಯ ಸ್ಪರ್ಧೆಗಳು ಬೆಂಗಳೂರು ಹಾಗೂ ಮುಂಬೈನಲ್ಲಿ ಮಾತ್ರ ನಡೆಯುತ್ತಿವೆ. ದಾವಣಗೆರೆಯಲ್ಲೂ ನಡೆಸುವ ಆಲೋಚನೆ ಇದ್ದು, ಮಕ್ಕಳ ವಿಭಾಗದಲ್ಲಿ 4ರಿಂದ7, 8ರಿಂದ 12 ಹಾಗೂ 13ರಿಂದ 16 ವರ್ಷ, ‘ಮಿಸ್’ ವಿಭಾಗದಲ್ಲಿ 18ರಿಂದ 30 ವರ್ಷ ಹಾಗೂ ‘ಮಿಸೆಸ್’ ವಿಭಾಗದಲ್ಲಿ 20ರಿಂದ 40, 41ರಿಂದ 60 ಹಾಗೂ 60 ವರ್ಷದ ಮೇಲ್ಪಟ್ಟವರನ್ನು ಆಯ್ಕೆ ಮಾಡಲಾಗುವುದು’ ಎಂದರು.

‘ಅಂತಿಮ ಘಟ್ಟಕ್ಕೆ ಆಯ್ಕೆಯಾದ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್‌ಗಳನ್ನು ನೀಡಲಾಗುವುದು. ಪ್ರತಿಯೊಂದು ಗುಂಪಿಗೂ ಸಬ್‌ ಟೈಟಲ್‌ಗಳನ್ನು ನೀಡಲಾಗುವುದು. ಪ್ರಥಮ ಬಹುಮಾನ ಪಡೆದ ಮಿಸ್ ಹಾಗೂ ಮಿಸಸ್ ಗುಂಪಿನವರಿಗೆ ತಲಾ ₹10 ಸಾವಿರ, ಕ್ರೌನ್ ಶೀಲ್ಡ್, ಗಿಫ್ಟ್‌ ವೋಚರ್‌ಗಳನ್ನು ನೀಡಲಾಗುವುದು. ಮಕ್ಕಳ ವಿಭಾಗದಲ್ಲಿ ವಿಜೇತರಾದವರಿಗೆ ₹5 ಸಾವಿರ ಬಹುಮಾನ ನೀಡಲಾಗುವುದು’ ಎಂದು ಹೇಳಿದರು.

‘ಡಿಸೆಂಬರ್ 3 ಹಾಗೂ 12ರಂದು ಆಡಿಷನ್ ನಡೆಯಲಿದ್ದು, ನೋಂದಣಿಗೆ ನವೆಂಬರ್ 29ರಂದು ಕಡೆಯ ದಿನಾಂಕವಾಗಿದೆ. ಮಾಹಿತಿಗೆ 9739748550, 8105813692 ಸಂಪರ್ಕಿಸಬಹುದು’ ಎಂದರು.

ಸಂಸ್ಥೆಯ ಮುಖ್ಯ ಸಂಯೋಜಕ ಪಂಚಾಕ್ಷರಿ, ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬಸವರಾಜಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು