ಸಾಸ್ವೆಹಳ್ಳಿ: ಹೋಬಳಿಯ ಬೆನಕನಹಳ್ಳಿ ಗ್ರಾಮದ ಬೆನಕೇಶ್ವರ ಸ್ವಾಮಿಯ ತಿರುಗುಣಿ ರಥೋತ್ಸವ ಗುರುವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ರಥವನ್ನು ಕನಕಾಂಬರ, ಸೇವಂತಿಗೆ, ಜಾಜಿ ಮಲ್ಲಿಗೆ ಹಾಗೂ ಆಳೆತ್ತರದ ಹೂವಿನ ಹಾರ ಮತ್ತು ರುದ್ರಾಕ್ಷಿ ಮಾಲೆಗಳಿಂದ ಅಲಂಕರಿಸಲಾಗಿತ್ತು. ಬಣ್ಣದ ಬಟ್ಟೆ, ಬಾಳೆಹಣ್ಣಿನ ಗೊನೆ ಹಾಗೂ ಪೇರಲ ಹಣ್ಣುಗಳಿಂದ ರಥವನ್ನು ಅಲಂಕರಿಸಲಾಗಿತ್ತು.

ಚಿಕ್ಕಬಾಸೂರು ಬಸವೇಶ್ವರ ಸ್ವಾಮಿ ಹಾಗೂ ಗ್ರಾಮದ ಬೆನಕೇಶ್ವರ ಸ್ವಾಮಿ ರಥಾರೋಹಣ ಮಾಡುತ್ತಿದ್ದಂತೆ, ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಜೈಕಾರಗಳೊಂದಿಗೆ ರಥ ಎಳೆದರು. ದೇವಸ್ಥಾನದ ಮುಂಭಾಗ ಒಣಕೊಬ್ಬರಿ ಸುಟ್ಟು ಹರಕೆ ಸಲ್ಲಿಸಲಾಯಿತು. ಮಳೆ, ಬೆಳೆ ಸಮೃದ್ಧಿಯಾಗಲೆಂದು ಭಕ್ತರು ಪ್ರಾರ್ಥಿಸಿದರು.

ರಥೋತ್ಸವದ ನಂತರ ಗ್ರಾಮದ ಆಂಜನೇಯ, ಬೀರಪ್ಪ, ಕರಿಯಮ್ಮ ಹಾಗೂ ದುರ್ಗಮ್ಮ ದೇವಿ, ಉಚ್ಚಂಗೆಮ್ಮ ಮೂರ್ತಿಗಳ ಉತ್ಸವ ನಡೆಸಿ, ಮೂರ್ತಿಗಳನ್ನು ಬೆನಕೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರಿಗೆ ಪಾನಕ ವಿತರಿಸಲಾಯಿತು. ಸಂಜೆ ಓಕುಳಿ ಉತ್ಸವದ ಬಳಿಕ ದೇವತೆಗಳಿಗೆ ತುಂಗಾಭದ್ರಾ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ, ಮೆರವಣಿಗೆಯ ಮೂಲಕ ಮೂಲ ಸ್ಥಾನಗಳಲ್ಲಿ ಮರು ಪ್ರತಿಷ್ಠಾಪಿಸಲಾಯಿತು.

ತಿರುಗುಣಿ ವಿಶೇಷ:

ಈ ರಥೋತ್ಸವದಲ್ಲಿ ರಥವನ್ನು ಎರಡು ಭಾಗಗಳಾಗಿ ಮಾಡಲಾಗುತ್ತದೆ. ಕುಂಬಾರನ ಚಕ್ರದ ಮಾದರಿಯಲ್ಲಿ ತಲೆಯ ಭಾಗಕ್ಕೆ ಬೇರಿಂಗ್ ಅಳವಡಿಸಿ, ಚಕ್ಕಡಿ ಗಾಲಿ ಬಳಸಿ ಇದನ್ನು ನಿರ್ಮಿಸಲಾಗಿದೆ. ರಥದ ಒಳಗಿರುವ ಭಕ್ತರು ಚಕ್ರವನ್ನು ತಿರುಗಿಸಿದಾಗ, ರಥದ ಮೇಲ್ಭಾಗವು ಬುಗುರಿಯಂತೆ ತಿರುಗುವುದು ಇಲ್ಲಿನ ವಿಶೇಷ.

ಗ್ರಾಮದ ಐತಿಹ್ಯ: ‘ಹಿಂದೆ ದನಗಾಹಿಗಳು ದನ ಮೇಯಿಸುತ್ತಿದ್ದಾಗ ಹಸುವೊಂದು ಹುತ್ತಕ್ಕೆ ಹಾಲು ಸುರಿಸುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಹುತ್ತ ಪರಿಶೀಲಿಸಿದಾಗ ಕಲ್ಲಿನಲ್ಲಿ ಗಣೇಶನ ರೂಪ ಗೋಚರಿಸಿತು. ನಂತರ ಇಲ್ಲಿ ದೇವಸ್ಥಾನ ನಿರ್ಮಿಸಲಾಯಿತು’ ಎಂದು ಗ್ರಾಮದ ಹಿರಿಯರು ಸ್ಮರಿಸುತ್ತಾರೆ.

ಅಂದಿನಿಂದ ಈ ಗ್ರಾಮಕ್ಕೆ ಬೆನಕನಹಳ್ಳಿ ಎಂಬ ಹೆಸರು ಬಂದಿದೆ. ಈ ಗ್ರಾಮದ ಪ್ರತಿ ಕುಟುಂಬದ ಗಂಡು ಮಗುವಿಗೆ ಬೆನಕಪ್ಪ ಹಾಗೂ ಹೆಣ್ಣು ಮಗುವಿಗೆ ಬೆನಕಮ್ಮ ಎಂದು ಹೆಸರಿಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.