ಸೋಮವಾರ, ಏಪ್ರಿಲ್ 19, 2021
25 °C

ವ್ಯರ್ಥವಾಗಿ ಹರಿಯುತ್ತಿದೆ ಭದ್ರಾ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭದ್ರಾ ನಾಲೆಯ ನೀರು ನಗರದ ಬನಶಂಕರಿ ಬಡಾವಣೆಯಲ್ಲಿ ಬಳಿ ವ್ಯರ್ಥವಾಗಿ ಹರಿದುಹೋಗುತ್ತಿದೆ.

‘ಈ ಬಡಾವಣೆಯಲ್ಲಿ 20 ಎಕರೆಯಷ್ಟು ಜಮೀನು ಇದ್ದು,  ಎಲ್ಲಾ ಜಮೀನುಗಳು ನಿವೇಶನಗಳಾಗಿವೆ. ಇದಕ್ಕೆ 10 ಎಚ್‌ಪಿ ಸಾಮರ್ಥ್ಯದ ಮೋಟರ್ ನೀರು ಸಾಕು. ಆದರೆ ಇಲ್ಲಿ 100 ಎಚ್‌ಪಿ ನೀರು ಬಿಡಲಾಗಿದೆ. ಇದರಿಂದಾಗಿ ಖಾಲಿ ನಿವೇಶನಗಳಲ್ಲಿ ನೀರು ಪೋಲಾಗುತ್ತಿದೆ’ ಎಂದು ರೈತಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನೀರೆತ್ತುವ ಪಂಪ್‌ಗೆ ವೆಲ್ಡಿಂಗ್ ಮಾಡಿಸಿದ್ದು, ಹಗಲು ವೇಳೆ ಕಾಯುತ್ತೇವೆ. ಆದರೆ ರಾತ್ರಿ ವೇಳೆ ದನಗಾಹಿಗಳು ಪಂಪ್ ಆನ್ ಮಾಡಿಕೊಂಡು ಖಾಲಿ ಜಾಗದಲ್ಲಿ ನೀರು ತುಂಬಿಸಿ ಆ ಜಾಗದಲ್ಲಿ ಹುಲ್ಲನ್ನು ಬೆಳೆಯುತ್ತಿದ್ದಾರೆ’ ಎಂದು ಅಧಿಕಾರಿಗಳು ದೂರುತ್ತಾರೆ.

‘ಪೋಲಾಗುತ್ತಿರುವ ನೀರನ್ನು ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಕುಕ್ಕವಾಡ, ಬಲ್ಲೂರು, ಕನಕಗೊಂಡನಹಳ್ಳಿ ಮುಂತಾದ ಹಳ್ಳಿಗಳಿಗೆ ಹರಿಸಿದರೆ ಅನುಕೂಲವಾಗುತ್ತದೆ’ ಎಂದು ರೈತ ಮುಖಂಡ ಬಲ್ಲೂರು ರವಿಕುಮಾರ್ ಒತ್ತಾಯಿಸುತ್ತಾರೆ.

‘ಭದ್ರಾ ಕಾಲುವೆಯ ಕೆಳಗಡೆ ನಿವೇಶನಗಳು ಇದ್ದು, ಪೈಪ್‌ಗೆ ವೆಲ್ಡಿಂಗ್ ಮಾಡಿಸಿದರೂ ಅದನ್ನು ಕಿತ್ತು ಹಾಕಿದ್ದಾರೆ. ಸೋಮವಾರ ಇನ್ನೊಮ್ಮೆ ವೆಲ್ಡಿಂಗ್ ಮಾಡಿಸುತ್ತೇವೆ’ ಎನ್ನುತ್ತಾರೆ ಎಇಇ ಶ್ರೀಧರ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.