ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗಳಲ್ಲಿ ಅರಳಿದ ಭಗತ್ ಸಿಂಗ್ ಕಲಾಕೃತಿ

ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಪ್ರದೀಪ್ ದುದಾನಿ ಅವರಿಂದ ರಚನೆ
Last Updated 17 ಆಗಸ್ಟ್ 2021, 2:19 IST
ಅಕ್ಷರ ಗಾತ್ರ

ದಾವಣಗೆರೆ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಭಗತ್‌ಸಿಂಗ್ ಅವರ ಭಾವಚಿತ್ರವನ್ನು 39 ಸಾವಿರ ಶರ್ಟ್ ಗುಂಡಿಗಳಲ್ಲಿ ರಚಿಸುವ ಮೂಲಕ ನಗರದ ವಿದ್ಯಾರ್ಥಿ ಪ್ರದೀಪ್ದುದಾನಿ ಗಮನ ಸೆಳೆದಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರದೀಪ್ ಈ ಕಲಾಕೃತಿಯನ್ನು ರಚಿಸಿದ್ದಾರೆ.

ತಮ್ಮ ಕಾಲೇಜು ಆವರಣದಲ್ಲಿ ಪ್ಲೈವುಡ್ ಶೀಟ್ ಮೇಲೆ ಕಪ್ಪು, ಕೆಂಪು, ಬಿಳಿ, ಹಸಿರು ಮತ್ತು ನೀಲಿ ಬಣ್ಣದ ಗುಂಡಿಗಳನ್ನು ಜೋಡಿಸಿ ಭಗತ್‌ಸಿಂಗ್ ಅವರ ಭಾವಚಿತ್ರ ರಚಿಸಿದ್ದಾರೆ. ಅದು 6 ಅಡಿ ಅಗಲ, 8 ಅಡಿ ಉದ್ದವಿದೆ. ಬಾವುಟಕ್ಕೆ 15 ಕೆಜಿ ರಂಗೋಲಿಯನ್ನು ತುಂಬಿದ್ದಾರೆ.

42 ಗಂಟೆಗಳ ಕಾಲ ಕೆಲಸ ಮಾಡಿ ಈ ಕಲಾಕೃತಿಯನ್ನು ರಚಿಸಿದ್ದಾರೆ. ಭಾನುವಾರ ಕಾಲೇಜು ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ವೇಳೆ ಈ ಕಲಾಕೃತಿ ಎಲ್ಲರ ಗಮನ ಸೆಳೆಯಿತು.

ಪ್ರದೀಪ್ ಅವರು ಭಗತ್‌ಸಿಂಗ್ ಅವರ ಜೀವನ ಚರಿತ್ರೆಯ ಕಿರುಚಿತ್ರವನ್ನೂ ತಯಾರಿಸಿದ್ದು, ಯೂಟ್ಯೂಬ್‌ನಲ್ಲಿ ಹಾಕಿದ್ದಾರೆ. ದಾರದಲ್ಲಿ ನಟ ಸೋನು ಸೂದ್ ಅವರ ಚಿತ್ರ ಬಿಡಿಸಿದ್ದು, ಸೋನು ಸೂದ್ ಅವರೇ ಮುಂಬೈಗೆ ಕರೆಸಿಕೊಂಡು ಶ್ಲಾಘಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದಪ್ರೊ. ಸಾಹಿರಾಭಾನು ಫರೂಕಿ ಹಾಗೂ ಕಾಲೇಜಿನ ಅಧ್ಯಾಪಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT