ಶನಿವಾರ, ಜೂನ್ 19, 2021
26 °C

ದಾವಣಗೆರೆ | ಬೈಕ್‌ ಅಪಘಾತ: ಚಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಎರೆಹಳ್ಳಿ ಗ್ರಾಮದಲ್ಲಿ ಎದುರಿನ ಬೈಕ್‌ಗೆ ಡಿಕ್ಕಿಯಾಗಿ ‍ಪಲ್ಟಿಯಾದ ಇನ್ನೊಂದು ಬೈಕ್‌ನ ಸವಾರ ಮೃತಪಟ್ಟಿದ್ದಾರೆ.

ಚನ್ನಗಿರಿ ತಾಲ್ಲೂಕು ಶಿವಾಜಿನಗರದ ಆಂಜನೇಯ (22) ಶರತ್‌ ಎಂಬವರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ಉಂಟಾಗಿದೆ. ರಸ್ತೆಗೆ ಬಿದ್ದ ಆಂಜನೇಯ ಅವರ ತಲೆಗೆ ಏಟು ಬಿದ್ದಿದೆ. ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಒಯ್ಯುತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ಶರತ್‌ಗೆ ಸಣ್ಣ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.