ಶುಕ್ರವಾರ, ಮಾರ್ಚ್ 31, 2023
25 °C

ದಾವಣಗೆರೆ: ಕೇಕ್‌ ಕತ್ತರಿಸಿ ಹೋರಿಯ ಹುಟ್ಟುಹಬ್ಬ ಆಚರಿಸಿದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗುತ್ತಿ (ನ್ಯಾಮತಿ): ತಾಲ್ಲೂಕಿನ ಬೆಳಗುತ್ತಿ ಗ್ರಾಮದ ಯುವಕನೊಬ್ಬ ತನ್ನ ನೆಚ್ಚಿನ ಹೋರಿಯ ಹುಟ್ಟುಹಬ್ಬವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಆಚರಿಸಿದ್ದಾನೆ.

ಬೆಳಗುತ್ತಿ ಗ್ರಾಮದ ಮಂಜುನಾಥ್ ಎಂಬ ಯುವಕ ತನ್ನ ನೆಚ್ಚಿನ ಹೋರಿ ತೀರ್ಥಗಿರಿ ಡಾನ್ಹೋರಿಯಾ ಹುಟ್ಟುಹಬ್ಬವನ್ನು ಶಾಸಕರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಸೋಮವಾರ ಆಚರಿಸಿದರು.

ಕಳೆದ 14 ವರ್ಷದಿಂದ ಹೋರಿ ಬೆದರಿಸುವ ಹಬ್ಬದಲ್ಲಿ ಈ ಹೋರಿಯನ್ನು ಯಾರಿಂದಲೂ ಹಿಡಿಯಲು ಆಗಿಲ್ಲ. ಕೊರಳಿಗೆ ಕಟ್ಟಿದ ಕೊಬ್ಬರಿಯನ್ನೂ ಯಾರಿಗೂ ಕೀಳಲು ಸಾಧ್ಯವಾಗಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು ಗ್ರಾಮಸ್ಥರು.

ಹೋರಿ ಸಾಕುವುದನ್ನು ಹವ್ಯಾಸ ಮಾಡಿಕೊಂಡಿರುವ ಮಂಜುನಾಥ್‌ ಅವರು ಹೋರಿಗೆ ಹಾಲು, ಹುರುಳಿ, ಮೊಟ್ಟೆ ಸೇರಿ ವಿವಿಧ ಆಹಾರಗಳನ್ನು ಪ್ರತಿನಿತ್ಯ ನೀಡುವ ಮೂಲಕ ಅತ್ಯಂತ ಪ್ರೀತಿಯಿಂದ ಸಾಕಿದ್ದಾರೆ. ಈ ಹೋರಿಯು ಸಾಕಷ್ಟು ಬಹುಮಾನ ತಂದು ಕೊಟ್ಟಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು