ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕಿತರಿಬ್ಬರು ಗುಣಮುಖ

Last Updated 24 ಜೂನ್ 2021, 6:44 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಬುಧವಾರ ಯಾರಲ್ಲೂ ಕಂಡು ಬಂದಿಲ್ಲ. ಇಬ್ಬರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇಲ್ಲಿವರೆಗೆ ಒಟ್ಟು 96 ಮಂದಿಯಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದ್ದು, ಅದರಲ್ಲಿ ಒಟ್ಟು 49 ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 59 ಪ್ರಕರಣ ದೃಢಪಟ್ಟಿದ್ದು, 31 ಮಂದಿ ಗುಣಮುಖರಾಗಿದ್ದಾ‌ರೆ. ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ 34 ಮಂದಿಯಲ್ಲಿ ಶಿಲೀಂಧ್ರ ಕಾಣಿಸಿಕೊಂಡಿದ್ದು, 17 ಮಂದಿ ಗುಣಮುಖರಾಗಿದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಬಿಡುಗಡೆಗೊಂಡಿದ್ದಾರೆ. ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಕೊರೊನಾದಿಂದ 8 ಮಂದಿ ಸಾವು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 8 ಮಂದಿ ಮೃತಪಟ್ಟಿರುವುದುಬುಧವಾರ ದೃಢಪಟ್ಟಿದೆ.

ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆಯ 60 ವರ್ಷದ ವೃದ್ಧ, ಮಂತ್ರಘಟ್ಟದ 55 ವರ್ಷದ ಮಹಿಳೆ, ಸಂತೇಬೆನ್ನೂರಿನ 65 ವರ್ಷದ ವೃದ್ಧೆ, ಹರಿಹರ ತಾಲ್ಲೂಕಿನ ಭಾನುವಳ್ಳಿ ಎ.ಕೆ. ಕಾಲೊನಿಯ 36 ವರ್ಷದ ಪುರುಷ, ಕುಣೆಬೆಳಕೆರೆಯ 48 ವರ್ಷದ ಪುರುಷ, ದಾವಣಗೆರೆ ತಾಲ್ಲೈಕಿನ ಮಳಲಕೆರೆಯ 45 ವರ್ಷದ ಮಹಿಳೆ, ಆಜಾದ್‌ನಗರದ 36 ವರ್ಷದ ಪುರುಷ ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 74, ಹರಿಹರ ತಾಲ್ಲೂಕಿನಲ್ಲಿ 10, ಚನ್ನಗಿರಿ ತಾಲ್ಲೂಕಿನಲ್ಲಿ 21, ಹೊನ್ನಾಳಿ ತಾಲ್ಲೂಕಿನ 11, ಜಗಳೂರು ತಾಲ್ಲೂಕಿನಲ್ಲಿ 1 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 2 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT