ಬಿಎಸ್‌ಎನ್‌ಎಲ್‌ಗೆ ಹೆಸರಿದೆ, ಅದನ್ನು ಉಳಿಸೋಣ

7
ಚಿತ್ರದುರ್ಗ ಟೆಲಿಕಾಂ ಡಿಸ್ಟ್ರಿಕ್‌ನ ಪ್ರಧಾನ ವ್ಯವಸ್ಥಾಪಕ ಜಿ.ಎಲ್. ಗೌತಮ್

ಬಿಎಸ್‌ಎನ್‌ಎಲ್‌ಗೆ ಹೆಸರಿದೆ, ಅದನ್ನು ಉಳಿಸೋಣ

Published:
Updated:
Deccan Herald

ದಾವಣಗೆರೆ: ಬಿಎಸ್‌ಎನ್‌ಎಲ್ ಸಂಸ್ಥೆಗೆ ಒಳ್ಳೆಯ ಹೆಸರು ಇದೆ. ಜನಸಾಮಾನ್ಯರಲ್ಲಿ ಸಂಸ್ಥೆ ಬಗ್ಗೆ ಅಭಿಮಾನವಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕಿದೆ ಬಿಎಸ್‌ಎನ್‌ಎಲ್‌ ಚಿತ್ರದುರ್ಗ ಟೆಲಿಕಾಂ ಡಿಸ್ಟ್ರಿಕ್‌ನ ಪ್ರಧಾನ ವ್ಯವಸ್ಥಾಪಕ ಜಿ.ಎಲ್. ಗೌತಮ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಗುರುವಾರ ಬಿಎಸ್‌ಎನ್‌ಎಲ್‌ ಕಾರ್ಮಿಕರ ರಾಷ್ಟ್ರೀಯ ಸಂಘ ಹಾಗೂ ಚಿತ್ರದುರ್ಗ ಟೆಲಿಕಾಂ ಡಿಸ್ಟಿಕ್ ಸಹಯೋಗದಲ್ಲಿ ಏರ್ಪಡಿಸಿದ್ದ ಗುಣಮಟ್ಟದ ಸೇವೆಗಳ ಕುರಿತ ಜಿಲ್ಲಾ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಬಿಎಸ್‌ಎನ್‌ಎಲ್‌ಗೆ ಇತ್ತೀಚೆಗೆ ಅನುದಾನ ಕೊರತೆಯಾಗಿದೆ. ಹೀಗಾಗಿ, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವಲ್ಲಿ ಹಿನ್ನಡೆಯಾಗಿದೆ. ನೌಕರರು ಪ್ರಮಾಣಿಕ ಪ್ರಯತ್ನ ಮಾಡುವ ಮೂಲಕ ಉತ್ತಮ ಸೇವೆ ಒದಗಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಖಾಸಗಿ ಸಂಸ್ಥೆಗಳೊಂದಿಗೆ ಪೈಪೋಟಿ ನೀಡಬೇಕಾದರೆ ಬಿಎಸ್‌ಎನ್‌ಎಲ್ ಸೇವೆಗಳ ಗುಣಮಟ್ಟ ಸುಧಾರಣೆಯಾಗಬೇಕು. ಬಿಎಸ್‌ಎನ್‌ಎಲ್‌ನ ವೈಫೈ, 4ಜಿ, ಸ್ಪೆಕ್ಟ್ರಂ ಸಾಮಗ್ರಿಗಳಲ್ಲಿ ಸಮಸ್ಯೆ ಇದೆ. ಬ್ರಾಡ್‌ಬ್ಯಾಂಡ್, ಲಾಂಡ್‌ಲೈನ್ ಉತ್ತಮ ಸ್ಥಿತಿಯಲ್ಲಿವೆ. ಆದರೆ, ರಿಲಯನ್ಸ್ ಜಿಯೊ ಮಾರುಕಟ್ಟೆಗೆ ಬಂದ ಮೇಲೆ ಬ್ರಾಡ್‌ಬ್ಯಾಂಡ್ ಸೇವೆ ಪಡೆದುಕೊಳ್ಳುವವರ ಸಂಖ್ಯೆ ಇಳಿಮುಖವಾಗಿದೆ. ಆದ್ದರಿಂದ, ಬಿಎಸ್‌ಎನ್‌ಎಲ್ ನೌಕರರು ಗುಣಮಟ್ಟದ ಸೇವೆ ನೀಡುವುದಕ್ಕೆ ಗಮನಹರಿಸಬೇಕು. ಗ್ರಾಹಕರನ್ನು ಕಳೆದುಕೊಳ್ಳಬಾರದು. ಬೇರೆ ಸಿಮ್‌ ಜತೆಗೆ ಬಿಎಸ್‌ಎನ್‌ಎಲ್ ಸಿಮ್‌ ಕೂಡ ಇರಬೇಕು ಎನ್ನುವ ಮನೋಭಾವ ಗ್ರಾಹಕರಲ್ಲಿ ಬರುವಂತೆ ಮಾಡಬೇಕಿದೆ ಎಂದು ಹೇಳಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಜಯಪ್ರಕಾಶ್, ‘ಗುಣಮಟ್ಟದ ಸೇವೆ ನೀಡಬೇಕಾದರೆ ಬಿಎಸ್‌ಎನ್‌ಎಲ್‌ಗೆ ಗುಣಮಟ್ಟದ ಉಪಕರಣನ್ನು ಪೂರೈಸುವ ಜತೆಗೆ ಹೆಚ್ಚಿನ ಅನುದಾನ ಕೊಡಬೇಕು. ಹಾಗೆಯೇ ನಮ್ಮ ಎಲ್ಲಾ ಅಧಿಕಾರಿ, ಸಿಬ್ಬಂದಿಯಲ್ಲಿ ಸಮನ್ವಯತೆ ಇರಬೇಕು’ ಎಂದರು.

ಬಿಎಸ್‌ಎನ್‌ಎಲ್ ನಷ್ಟ ಅನುಭವಿಸುತ್ತಿದ್ದರೂ ಉತ್ತಮ ಸೇವೆ ನೀಡುತ್ತಿದೆ. ಏರಟೆಲ್, ಐಡಿಯಾ, ಜಿಯೊ ಕಂಪನಿಗಳು ನಗರದ ಗ್ರಾಹಕರಿಗೆ ಸೇವೆ ನೀಡಿದರೆ, ಬಿಎಸ್‌ಎನ್‌ಎಲ್ ಗ್ರಾಮೀಣ ಜನರಿಗೆ ಸೇವೆ ಒದಗಿಸುತ್ತಿದೆ. ಖಾಸಗಿ ಕಂಪನಿಗಳ ಸೇವೆ ಕ್ಷಣಿಕ. ಆದರೆ, ಬಿಎಸ್‌ಎನ್‌ಎಲ್ ಕೊನೆವರೆಗೂ ಇರಲಿದೆ. ಹೀಗಾಗಿ, ಗ್ರಾಹಕರು ಕೂಡ ಬಿಎಸ್‌ಎನ್‌ಎಲ್‌ ಜತೆಗೇ ಸಾಗಬೇಕು ಎಂದು ಹೇಳಿದರು.

ಈಗಾಗಲೇ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದು, ವೇತನ ಪರಿಷ್ಕರಣೆ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಉಪ ವ್ಯವಸ್ಥಾಪಕರಾದ ನರಸಿಂಹಪ್ಪ, ಕೆ.ಎನ್. ಮಠದ್, ಆಂತರಿಕ ಹಣಕಾಸು ಸಲಹೇಗಾರ ಓಂಕಾರಮೂರ್ತಿ, ಮುಖಂಡರಾದ ಟಿ.ಎಂ. ಪಟ್ಟಯ್ಯ, ಜಿ.ಎಫ್. ಮಡಿವಾಳರ್, ಸಂಘಟನೆಯ ರಾಜ್ಯ ವೃತ್ತದ ಕಾರ್ಯದರ್ಶಿ ಎಂ. ಮಹಲಿಂಗಯ್ಯ, ಪಿ. ವಿಶ್ವನಾಥ್, ಆರ್. ಜಯಪ್ಪ, ಗೋಪಾಲಸ್ವಾಮಿ, ಎಚ್.ಎಸ್. ನಿಜಲಿಂಗಪ್ಪ, ಕೆ. ಬಸವರಾಜ್, ನಾಗರಾಜ್ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !