ಬುಧವಾರ, ಜನವರಿ 29, 2020
28 °C

ಬಸ್‌ ಹರಿದು ಬೈಕ್‌ ಸವಾರರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ಅರುಣ ಚಿತ್ರಮಂದಿರದ ಬಳಿ ಸೋಮವಾರ ಸಿಗ್ನಲ್‌ನಲ್ಲಿ ನಿಂತಿದ್ದ ಬಸ್‌ ಚಾಲಕನ ಧಾವಂತಕ್ಕೆ ಬೈಕ್‌ ಸವಾರರಿಬ್ಬರು ಬಲಿಯಾಗಿದ್ದಾರೆ.

ಹರಪನಹಳ್ಳಿ ತಾಲ್ಲೂಕು ಜಂಗಮ ತುಂಬಿಗೆರೆಯಲ್ಲಿ ಶಿಕ್ಷಕನಾಗಿರುವ, ಇಲ್ಲಿನ ಎಸ್‌ಎಸ್‌ ಲೇಔಟ್‌ ಬಿ ಬ್ಲಾಕ್‌ ನಿವಾಸಿ ಬಸವರಾಜಪ್ಪ (42) ಮತ್ತು ಅಪೂರ್ವ ರೆಸಾರ್ಡ್‌ನಲ್ಲಿ ಕೆಲಸ ಮಾಡುವ ವಿನೋಬನಗರ ನಿವಾಸಿ ಸ್ವಾಮಿ ಜೆ.ಎಂ. (60) ಮೃತಪಟ್ಟವರು. ಇಬ್ಬರೂ ತಮ್ಮ ತಮ್ಮ ಬೈಕ್‌ಗಳಲ್ಲಿ ಬಂದಿದ್ದು ಸಿಗ್ನಲ್‌ ಬಿದ್ದಿದ್ದರಿಂದ ನಿಲ್ಲಿಸಿದ್ದರು. ಪಕ್ಕದಲ್ಲಿ ಸ್ಟೀಲ್‌ ಫ್ಯಾಕ್ಟರಿ ಕಾರ್ಖಾನೆಯೊಂದರ ಕಾರ್ಮಿಕರನ್ನು ಒಯ್ಯುವ ಬಸ್‌ ನಿಂತಿತ್ತು. ಹಸಿರು ಸಿಗ್ನಲ್‌ ಬರುತ್ತಿದ್ದಂತೆ ಬಸ್‌ ಚಾಲಕ ಒಮ್ಮೆಲೇ ಮುಂದಕ್ಕೆ ಚಲಾಯಿಸಲು ನೋಡಿದ್ದು, ಎದುರು ಇದ್ದ ಆಟೊಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ‌ಎಡಕ್ಕೆ ನುಗ್ಗಿಸಿದ್ದರಿಂದ ಎರಡೂ ಬೈಕ್‌ಗಳ ಮೇಲೆ ಬಸ್‌ ಹರಿದಿದೆ. ಇಬ್ಬರೂ ಮೃತಪಟ್ಟಿದ್ದಾರೆ. ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು