ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌: ಜಾಗೃತಿ ಜಾಥಾ ಸಹಾಯಕಾರಿ:ರಾಮೇನಹಳ್ಳಿ ಜಗನ್ನಾಥ

Last Updated 3 ಫೆಬ್ರುವರಿ 2023, 4:40 IST
ಅಕ್ಷರ ಗಾತ್ರ

‘ಕ್ಯಾನ್ಸರ್‌ ಎಂದರೆ ಸಾವು’ ಎಂಬ ಭಾವನೆ ಇನ್ನೂ ಹಲವರಲ್ಲಿ ಇದೆ. ಈ ಭಾವನೆ ಮತ್ತು ಅನಗತ್ಯ ಭಯವನ್ನು ಹೋಗಲಾಡಿಸಬೇಕಿದೆ. ಈ ರೋಗವನ್ನು ಗುಣಪಡಿಸಬಹುದು ಎಂಬ ಅರಿವನ್ನು ಎಲ್ಲರಲ್ಲಿ ಮೂಡಿಸಬೇಕಿದೆ. ಯುವಜನರನ್ನು ದುಶ್ಚಟಗಳಿಂದ ದೂರ ಇರುವಂತೆ ಜಾಗೃತಿ ಮೂಡಿಸಬೇಕಿದೆ.

‘ಪ್ರಜಾವಾಣಿ’ಯ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ಕ್ಯಾನ್ಸರ್‌ ಫೌಂಡೇಷನ್‌ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಫೆಬ್ರುವರಿ 4ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ‘ಕ್ಯಾನ್ಸರ್‌ ಜಾಗೃತಿ ಜಾಥಾ’ ನಿಜಕ್ಕೂ ಈ ನಿಟ್ಟಿನಲ್ಲಿ ಸಹಾಯಕವಾಗಿದೆ. ‘ಹೊಂದಿಸಿ ಬರೆಯಿರಿ’ ಕನ್ನಡ ಚಲನಚಿತ್ರ ತಂಡ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದೆ. ಚಿತ್ರವೂ ಕೆಲವು ಸಾಮಾಜಿಕ ಸಂದೇಶಗಳನ್ನು ಸಾರಲಿದ್ದು, ಚಿತ್ರದ ಪೂರ್ಣ ತಂಡವು ಈ ಜಾಥಾದಲ್ಲಿ ಪಾಲ್ಗೊಳ್ಳಲಿದೆ.

ಕ್ಯಾನ್ಸರ್‌ ಗೆದ್ದಿರುವ ದಾವಣಗೆರೆಯ ಹಿರಿಯ ಕಲಾವಿದ ಆರ್‌.ಟಿ. ಅರುಣ್‌ಕುಮಾರ್‌ ಅವರು ಕಳೆದ 10 ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದಾರೆ. ಇದೇ ರೀತಿ ಕ್ಯಾನ್ಸರ್‌ನಿಂದ ಗುಣವಾದವರು ತಮ್ಮ ಅನುಭವಗಳನ್ನು ಜನರ ಮುಂದೆ ತೆರೆದಿಟ್ಟಾಗ ಉಳಿದವರಿಗೂ ಈ ಕಾಯಿಲೆಯ ಲಕ್ಷಣಗಳು, ಚಿಕಿತ್ಸೆಯ ವಿವರ, ಧೈರ್ಯದಿಂದ ಎದುರಿಸುವ ವಿಧಾನ ತಿಳಿಯುತ್ತದೆ. ನಿಯಮಿತ ಆರೋಗ್ಯ ತಪಾಸಣೆ ಮೂಲಕ ಈ ರೋಗವನ್ನು ದೂರವಿಡಲು ಎಲ್ಲರೂ ಪ್ರಯತ್ನಿಸಬೇಕಿದೆ. ಕ್ಯಾನ್ಸರ್‌ ರೋಗಿಗಳಲ್ಲಿ ಮಾನಸಿಕ ಸಿದ್ಧತೆ ತುಂಬಾ ಅಗತ್ಯವಾಗಿರುವುದರಿಂದ ‘ಪ್ರಜಾವಾಣಿ’ ಪತ್ರಿಕಾ ಸಮೂಹ ಆಯೋಜಿಸಿರುವ ಈ ಜಾಥಾ ಸ್ಫೂರ್ತಿ ತುಂಬುವುದಕ್ಕಾಗಿ
ಸಹಾಯವಾಗಲಿದೆ.

– ರಾಮೇನಹಳ್ಳಿ ಜಗನ್ನಾಥ, ‘ಹೊಂದಿಸಿ ಬರೆಯಿರಿ’ ಚಿತ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT