ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾನ್ಸರ್‌: ಆತಂಕದಿಂದ ಮುಕ್ತಿ ಅಗತ್ಯ’

Last Updated 2 ಫೆಬ್ರುವರಿ 2023, 4:50 IST
ಅಕ್ಷರ ಗಾತ್ರ

ದಾವಣಗೆರೆ: ‘ಕ್ಯಾನ್ಸರ್‌ ಉಂಟುಮಾಡುವ ಪರಿಣಾಮಗಳಿಂದ ಸಾವಿಗೀಡಾಗುವವರಿಗಿಂತ, ಕ್ಯಾನ್ಸರ್‌ ತಗುಲಿದೆ ಎಂಬ ವಿಷಯ ತಿಳಿದ ಕೂಡಲೇ ತೀವ್ರ ಆತಂಕಕ್ಕೆ ಒಳಗಾಗಿ ಸಾವಿಗೀಡಾಗುವವರ ಸಂಖ್ಯೆಯೇ ಹೆಚ್ಚು. ಇಂಥ ಭಯ ಹೋಗಬೇಕಿದ್ದರೆ ಅರಿವು ಮುಖ್ಯ. ಕ್ಯಾನ್ಸರ್‌ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸುವುದಲ್ಲದೆ, ಆತ್ಮಸ್ಥೈರ್ಯ ಉಂಟುಮಾಡುವುದು ಇಂದಿನ ಅಗತ್ಯ’.

‘ಕ್ಯಾನ್ಸರ್‌ ವಿರುದ್ಧ ಹೋರಾಡಿ ಜಯಿಸಿರುವ ಹಿರಿಯ ಕಲಾವಿದ ಆರ್‌.ಟಿ. ಅರುಣಕುಮಾರ್‌ ಸಹಿತ ಅನೇಕರು ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ‘ಪ್ರಜಾವಾಣಿ’ ಫೆ.4ರಂದು ಹಮ್ಮಿಕೊಂಡಿರುವ ಜನಜಾಗೃತಿ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಅವರ ಜೀವನವೇ ಬೇರೆಯವರಿಗೆ ಸ್ಫೂರ್ತಿಯಾಗಬಲ್ಲದು. ಆತ್ಮಸ್ಥೈರ್ಯ ತುಂಬಬಲ್ಲದು. ನಾನೂ ಅವರೊಂದಿಗೆ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದೇನೆ.

ಯುವಜನತೆ ಕ್ಯಾನ್ಸರ್‌ಕಾರಕ ದುಶ್ಚಟಗಳಿಂದ ದೂರ ಉಳಿಯುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ. ಉತ್ಸಾಹಿಗಳಾಗಿರಬೇಕಾದ ವಯಸ್ಸಿನಲ್ಲಿ ಯುವಕರು ಕ್ಯಾನ್ಸರ್‌ಗೆ ಆಹ್ವಾನ ನೀಡುವುದು ಅವರ ಉಜ್ವಲ ಭವಿಷ್ಯಕ್ಕೂ, ಸಮಾಜಕ್ಕೂ ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ ತಿಳಿವಳಿಕೆ ಮೂಡಿಸಿ, ಕ್ಯಾನ್ಸರ್‌ನಿಂದ ಬಳಲುತ್ತಿರುವವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಸದುದ್ದೇಶದ ಈ ಜಾಗೃತಿಜಾಥಾದಲ್ಲಿ ಎಲ್ಲರೂ ಪಾಲ್ಗೊಳ್ಳಿ’.
–ರಜತ್‌ ಅಣ್ಣಪ್ಪ, ‘ಡೈಮಂಡ್‌ ಕ್ರಾಸ್‌’ ಚಲನಚಿತ್ರದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT