ಗುರುವಾರ , ನವೆಂಬರ್ 14, 2019
19 °C

ಕಲ್ಯಾಣ ಮಂಟಪದಲ್ಲಿ ಕಳವು ಮಾಡುತ್ತಿದ್ದವನ ಸೆರೆ

Published:
Updated:

ದಾವಣಗೆರೆ: ಕಲ್ಯಾಣ ಮಂಟಪಗಳಿಗೆ ತೆರಳಿ ಕಳವು ಮಾಡುತ್ತಿದ್ದ ಆರೋಪಿಯನ್ನು ಸೆಂಟ್ರಲ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ತಿಮ್ಮಣ್ಣ ಅವರ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶಾಂತಿನಗರ ಕಿರಣ್‌ ನಾಯ್ಕ್‌ (23) ಬಂಧಿತ ಆರೋಪಿ. ಬಕ್ಕೇಶ ಕಲ್ಯಾಣ ಮಂಟಪ, ಬಾಪೂಜಿ ಸಭಾಭವನ ಸೇರಿದಂತೆ ನಗರದಲ್ಲಿ ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆಯುವಲ್ಲಿಗೆ ಈತ ಹೋಗುತ್ತಿದ್ದ. ಹೆಣ್ಣುಮಕ್ಕಳು ಬೇರೆ ಕೆಲಸಗಳಲ್ಲಿ ತೊಡಗಿರುವ ಹೊತ್ತಿಗೆ ಯಾವುದಾರೂ ಬ್ಯಾಗ್‌ ತೆಗೆದುಕೊಂಡು ಪರಾರಿಯಾಗುತ್ತಿದ್ದ. ಈತನಿಂದ ಎರಡು ಮೊಬೈಲ್‌, ಚಿನ್ನ, ನಗದು ಸೇರಿ ಒಟ್ಟು ₹ 3.4 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರತಿಕ್ರಿಯಿಸಿ (+)