ಚನ್ನಗಿರಿ ಪುರಸಭೆ ಚುನಾವಣೆ: 49 ನಾಮಪತ್ರ

7

ಚನ್ನಗಿರಿ ಪುರಸಭೆ ಚುನಾವಣೆ: 49 ನಾಮಪತ್ರ

Published:
Updated:
Deccan Herald

ಚನ್ನಗಿರಿ:  ಇದೇ ತಿಂಗಳ 31ರಂದು ನಡೆಯುವ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶನಿವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳು 49 ನಾಮಪತ್ರ ಸಲ್ಲಿಸಿದ್ದಾರೆ.

1ರಿಂದ 8ನೇ ವಾರ್ಡ್‌ಗೆ 15 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್ 4, ಬಿಜೆಪಿ 7, ಜೆಡಿಎಸ್ 2 ಹಾಗೂ ಪಕ್ಷೇತರ 2. 9ರಿಂದ 16ನೇ ವಾರ್ಡ್‌ಗಳಿಗೆ ಕಾಂಗ್ರೆಸ್‌ನ 4, ಬಿಜೆಪಿ 5, ಜೆಡಿಎಸ್ 5 ಹಾಗೂ ಇಬ್ಬರು ಪಕ್ಷೇತರ ಸೇರಿ 17 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

‘17ರಿಂದ 23ನೇ ವಾರ್ಡ್‌ಗಳಿಗೆ 17 ಮಂದಿ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಕಾಂಗ್ರೆಸ್ 8, ಬಿಜೆಪಿ 7, ಜೆಡಿಎಸ್ 1 ಹಾಗೂ ಒಬ್ಬರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, 23 ಸದಸ್ಯ ಬಲವುಳ್ಳ ಪುರಸಭೆಗೆ 49 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ’ ಎಂದು ತಹಶೀಲ್ದಾರ್ ಎಸ್ ರವಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಎಪಿಎಂಸಿ ಕಚೇರಿ, ಪುರಸಭೆ ಕಾರ್ಯಾಲಯ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಕೇಂದ್ರಗಳನ್ನು ತೆರೆಯಲಾಗಿತ್ತು. ಆಯಾ ವಾರ್ಡ್‌ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

ಭಾನುವಾರದಿಂದ ಪ್ರಚಾರ ಬಿರುಸುಗೊಳ್ಳಲಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !