ಚನ್ನಗಿರಿ: ‘ಅಡಿಕೆ ನಾಡು’ ಎಂದೇ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನಲ್ಲಿ ಇನ್ನೇನು ಮುಂಗಾರು ಹಂಗಾಮು ಆರಂಭವಾಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅಧಿಕ ಸಂಖ್ಯೆಯ ರೈತರು ಅಡಿಕೆ ಬೆಳೆಯತ್ತ ವಾಲಿದ್ದು, ಅಡಿಕೆ ಸಸಿಗಳಿಗೆ ಬೇಡಿಕೆ ಹೆಚ್ಚಿದೆ. ಅಂತೆಯೇ ಸಸಿಗಳ ದರವೂ ಏರಿಕೆಯಾಗಿದೆ.

ತಾಲ್ಲೂಕಿನಲ್ಲಿ 54,000 ಹೆಕ್ಟೇರ್ ಕೃಷಿ ಭೂಮಿ ಇದ್ದು, ಇದರಲ್ಲಿ 11,000 ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗುತ್ತಿದೆ ಎಂಬುದು ಕೃಷಿ ಇಲಾಖೆಯ ಮಾಹಿತಿ. ಕೃಷಿ ಭೂಮಿಯಲ್ಲಿ ಹೊಸದಾಗಿ ಅಡಿಕೆ ತೋಟ ಮಾಡಲು ರೈತರು ಮುಂದಾಗುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಆಹಾರೋತ್ಪನ್ನಗಳ ಕ್ಷೇತ್ರ ಕಡಿಮೆಯಾಗುತ್ತಿದೆ.

10 ವರ್ಷಗಳ ಹಿಂದೆ 30,000 ಹೆಕ್ಟೇರ್ ಇದ್ದ ಅಡಿಕೆ ಬೆಳೆಯುವ ಪ್ರದೇಶ ಇಂದು 9,000 ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದ್ದು, 39,000 ಹೆಕ್ಟೇರ್ ಪ್ರದೇಶಕ್ಕೆ ತಲುಪಿದೆ.

ಮುಂಗಾರು ಆರಂಭವಾಗುತ್ತಿದ್ದಂತೆಯೇ ಅಡಿಕೆ ಸಸಿ ನೆಡುವ ಹಂಗಾಮು ಶುರುವಾಗುತ್ತದೆ. ಹಾಗಾಗಿ ವಾರದಿಂದ ರೈತರು ಅಡಿಕೆ ಸಸಿಗಳನ್ನು ಖರೀದಿಸಿ ಸಂಗ್ರಹಿಸಿಕೊಳ್ಳುತ್ತಿದ್ದಾರೆ.

‘ಒಂದು ಅಡಿಕೆ ಸಸಿ ಕನಿಷ್ಠ ₹ 70ರಿಂದ ಗರಿಷ್ಠ ₹ 100ರವರೆಗೆ ಮಾರಾಟವಾಗುತ್ತಿದೆ. ಈ ದರ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ 1,000 ಸಸಿ ಮಾರಾಟ ಮಾಡಿದ್ದೇವೆ. ಅಡಿಕೆಗೆ ಸಿಗುತ್ತಿರುವ ಉತ್ತಮ ದರದಿಂದಾಗಿ ಹೊಸದಾಗಿ ತೋಟ ಮಾಡಲು ರೈತರು ಮುಂದಾಗುತ್ತಿದ್ದಾರೆ’ ಎನ್ನುತ್ತಾರೆ ಅಡಿಕೆ ಸಸಿ ಮಾರಾಟಗಾರ, ಲಿಂಗದಹಳ್ಳಿ ಗ್ರಾಮದ ಚಂದ್ರಶೇಖರ್.

‘ಪ್ರತಿ ವರ್ಷ 4,000ದಿಂದ 5,000 ಎಕರೆ ಅಡಿಕೆ ಪ್ರದೇಶ ಹೆಚ್ಚಳವಾಗುತ್ತಿದೆ. ಅಡಿಕೆ ಬೆಳೆಯ ಮೇಲಿನ ಮೋಹ ಇದಕ್ಕೆ ಕಾರಣ. ಮುಂದೆ ಆಹಾರಧಾನ್ಯ ಬೆಳೆಯುವ ಪ್ರದೇಶವೇ ಇಲ್ಲದಂತಾಗಬಹುದು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-2142790272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.