ದೇಗುಲದಹಳ್ಳಿ (ಚನ್ನಗಿರಿ): ಭದ್ರಾ ಬಲದಂಡೆ ನಾಲೆ ಯೋಜನಾ ವ್ಯಾಪ್ತಿಗೆ ಸೇರಿದ ತಾಲ್ಲೂಕಿನ ದೇಗುಲದಹಳ್ಳಿ ಬಳಿ ಭದ್ರಾ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಮೇಲ್ಸೆತುವೆ ಕುಸಿದಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸದ್ದರಿಂದ ಗ್ರಾಮಸ್ಥರೇ ಸೇತುವೆಗೆ ಅಡ್ಡಲಾಗಿ ಸಿಮೆಂಟ್ ಗೋಡೆ ಕಟ್ಟಿ, ಮರದ ದಿಮ್ಮಿಗಳನ್ನು ಇಟ್ಟು ಬುಧವಾರದಿಂದ ಸಂಚಾರ ಸ್ಥಗಿತಗೊಳಿಸಿದ್ದಾರೆ.

ದೇಗುಲದಹಳ್ಳಿ, ಗುರುರಾಜಪುರ, ಲಕ್ಷ್ಮಯ್ಯ ಕ್ಯಾಂಪ್ ಹಾಗೂ ಬಸವಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದೆ. ಪ್ರತಿದಿನ ನೂರಾರು ಜನ ಹಾಗೂ ವಾಹನಗಳು ಇದರ ಮೇಲೆ ಸಂಚರಿಸುತ್ತಿದ್ದವು. ಮೇ 18ರ ರಾತ್ರಿ ಬಿದ್ದ ಮಳೆಗೆ ಸೇತುವೆಯ ಕೆಳಭಾಗದ ಮಣ್ಣು ಕುಸಿದಿದೆ. ಸೇತುವೆ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಸಂಭವ ಇದೆ. ಹೀಗಾಗಿ ಗ್ರಾಮಸ್ಥರು ಸಭೆ ನಡೆಸಿ ಸಂಚಾರ ಬಂದ್ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಸೇತುವೆ ಬಂದ್ ಆಗಿರುವುದರಿಂದ ನಾಲ್ಕು ಹಳ್ಳಿಗಳ ಜನ ಹಾಗೂ ವಾಹನಗಳು ಹೆಚ್ಚುವರಿಯಾಗಿ 3 ಕಿ.ಮೀ ಸುತ್ತಿಕೊಂಡು ಬೇರೆ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

‘ಈ ಸೇತುವೆ ಭದ್ರಾ ಬಲದಂಡೆ ನಾಲಾ ವ್ಯಾಪ್ತಿಗೆ ಸೇರಿದೆ. ಭದ್ರಾವತಿ ತಾಲ್ಲೂಕು ದೊಂಬರದ ಭೈರನಹಳ್ಳಿಯಲ್ಲಿ ಇಲಾಖೆಯ ಕಚೇರಿ ಇದ್ದು, ಮೇಲಧಿಕಾರಿಗಳೊಂದಿಗೆ ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಿರುವ ಬಗ್ಗೆ ಗುರುವಾರ ಇಲಾಖೆಯಿಂದ ಫಲಕ ಅಳವಡಿಸಿದ್ದೇವೆ. ಸೇತುವೆಯು ದುರಸ್ತಿ ಮಾಡಲಾಗದಷ್ಟು ಪ್ರಮಾಣದಲ್ಲಿ ಕುಸಿದಿದ್ದು, ಹೊಸ ಸೇತುವೆಯನ್ನೇ ನಿರ್ಮಿಸಬೇಕಾಗಿದೆ. ಇದಕ್ಕೆ ಕ್ರಿಯಾ ಯೋಜನೆ ತಯಾರಿಸಿ ₹ 1.25 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಹೊಸ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲಾಗುವುದು’ ಎಂದು ಇಲಾಖೆಯ ಎಇಇ ರುದ್ರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-43-1878119671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.