ಚನ್ನಗಿರಿ: ‘ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಅಡಿ ಕ್ಷೇತ್ರದ 44 ಫಲಾನುಭವಿಗಳಿಗೆ ಪೈಪ್, ಮೋಟಾರ್, ಪಂಪ್ ಹಾಗೂ ಇತರೆ ಪರಿಕರಗಳನ್ನು ವಿತರಿಸಲಾಗಿದ್ದು, ರೈತರು ಈ ಪರಿಕರಗಳನ್ನು ಉಪಯೋಗಿಸಿಕೊಂಡು ಬೆಳೆಗಳನ್ನು ಬೆಳೆದು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು’ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ಸಣ್ಣ ನೀರಾವರಿ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆ ಅಡಿ ವಿವಿಧ ಪರಿಕರಗಳನ್ನು ವಿತರಿಸಿ ಮಾತನಾಡಿದರು.

‘2025– 26ನೇ ಸಾಲಿನಲ್ಲಿ ಎಸ್ಸಿಪಿ ಯೋಜನೆ ಅಡಿ 18 ಹಾಗೂ ಟಿಎಸ್ಪಿ ಯೋಜನೆ ಅಡಿ 16 ಸೇರಿ ಒಟ್ಟು 44 ಫಲಾನುಭವಿಗಳಿಗೆ ಸರ್ಕಾರದಿಂದ ಕೊಳವೆಬಾವಿ ಕೊರೆಯಿಸಿ ₹ 1.70 ಕೋಟಿ ವೆಚ್ಚದ ಪರಿಕರಗಳನ್ನು ವಿತರಿಸಲಾಗಿದೆ’ ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯರಾದ ಶ್ರೀಕಾಂತ್ ಚವ್ಹಾಣ್, ಸೈಯದ್ ಗೌಸ್ಪೀರ್, ಬಿ.ಆರ್. ಹಾಲೇಶ್, ಮುಖಂಡರಾದ ಅಶೋಕ್, ಬಿ.ಎನ್. ರಾಜು, ಎಂ.ಪಿ. ಗಿರೀಶ್, ಮಧುಕುಮಾರ್, ಜಬೀವುಲ್ಲಾ, ರವಿಕುಮಾರ್, ವಿ.ಎ. ರುದ್ರಮುನಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-43-916110058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.