ಚನ್ನಗಿರಿ: ‘ಹಣ್ಣುಗಳ ರಾಜ’ ಮಾವಿನ ಇಳುವರಿ ಹಾಗೂ ದರ ಕುಸಿತದಿಂದಾಗಿ ಮಾವು ಬೆಳೆಗಾರರು ಈ ಬಾರಿ ಸಂಕಷ್ಟವನ್ನು ಎದುರಿಸುವಂತಾಗಿದೆ.

ತಾಲ್ಲೂಕಿನಲ್ಲಿ 2,250 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ‘ಉತ್ಕೃಷ್ಟ ದರ್ಜೆ’ ಎಂಬ ಕಾರಣಕ್ಕೆ ಇಲ್ಲಿನ ಹಣ್ಣುಗಳನ್ನು ನೆರೆಯ ರಾಜ್ಯಗಳಿಗೆ ಪ್ರತಿ ವರ್ಷ ರವಾನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ನೆರೆಯ ರಾಜ್ಯಗಳಲ್ಲಿ ಮಾವಿನಹಣ್ಣನ್ನು ಖರೀದಿಸಲು ವರ್ತಕರು ಹಿಂದೇಟು ಹಾಕಿದ್ದು, ಮಾವಿನಹಣ್ಣು ರವಾನೆಯಾಗುತ್ತಿಲ್ಲ. ಅಂತೆಯೇ ಖರೀದಿದಾರರು ರಸ್ತೆಯ ಬದಿಗಳಲ್ಲಿ ರಾಶಿ ಹಾಕಿಕೊಂಡು ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಮಂಡಿಗಳಲ್ಲಿನ ವರ್ತಕರಿಂದ ಕೆ.ಜಿಗೆ ₹ 20ರಂತೆ ಖರೀದಿಸುವ ಚಿಲ್ಲರೆ ಮಾರಾಟಗಾರರು ರಸ್ತೆ ಬದಿಗಳಲ್ಲಿ ರಾಶಿ ಹಾಕಿಕೊಂಡು ₹ 100ಕ್ಕೆ 2 ಕೆ.ಜಿ.ಯಂತೆ ಮಾರಾಟ ಮಾಡುತ್ತಿದ್ದಾರೆ.

‘ಫೆಬ್ರುವರಿಯಲ್ಲಿ ನಿರಂತರ ಮಂಜು ಸುರಿದ ಕಾರಣ ಮಾವಿನ ಮರಗಳಲ್ಲಿನ ಹೂವು ಹಾಗೂ ಹೀಚು ಉದುರಿ ಹೋಗಿದ್ದವು. ಜತೆಗೆ ಬೂದಿ, ಅಂಟುರೋಗಗಳಿಂದಲೂ ಮತ್ತು ಬಿಸಿಲಿನ ತಾಪವೂ ಹೆಚ್ಚಿದ್ದರಿಂದ ಈ ಬಾರಿ ಇಳುವರಿ ಕುಸಿತವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ತಿಳಿಸಿದರು.

‘ಮಧ್ಯಪ್ರಾಚ್ಯ ದೇಶಗಳಿಗೆ ನಮ್ಮ ದೇಶದ ಮಾವಿನಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದವು. ಅಲ್ಲಿ ಯುದ್ಧದ ಕಾರಣ ಈ ಬಾರಿ ಮಾವಿನಹಣ್ಣುಗಳ ರಫ್ತು ಆಗಿಲ್ಲ. ಇದೇ ಕಾರಣಕ್ಕೆ ನೆರೆಯ ರಾಜ್ಯಗಳ ಖರೀದಿದಾರರು ಮಾವಿನಹಣ್ಣುಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ದರ ಕುಸಿತವಾಗಿದೆ’ ಎಂದು ಅವರು ತಿಳಿಸಿದರು.

‘ರಸ್ತೆ ಬದಿಯಲ್ಲಿಯೇ ಹಣ್ಣುಗಳನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಮಾವಿನ ತೋಟಗಳ ಕೇಣಿದಾರರು ಅಧಿಕ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಮಾವಿನಹಣ್ಣುಗಳ ವ್ಯಾಪಾರಿ ಮನ್ಸೂರ್.

ತಾಲ್ಲೂಕಿನ ಸೂಳೆಕೆರೆ, ಹೊಸೂರು, ಕೆರೆಬಿಳಚಿ, ನಲ್ಲೂರು, ಸಂತೇಬೆನ್ನೂರು, ಕಾಕನೂರು, ನುಗ್ಗಿಹಳ್ಳಿ, ತಾವರೆಕೆರೆ, ಗರಗ ಕ್ರಾಸ್, ಚಿತ್ರದುರ್ಗ ರಸ್ತೆ ಮುಂತಾದ ಕಡೆಗಳಲ್ಲಿ ಹೆದ್ದಾರಿ ಬದಿಗಳಲ್ಲಿ ಮಾವಿನಹಣ್ಣುಗಳ ಮಾರಾಟ ನಡೆಯುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-1655123352

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.