ಚನ್ನಗಿರಿ: ತಾಲ್ಲೂಕಿನ ಮಾವಿನಹೊಳೆ, ಗಂಡುಗನಹಂಕಲು, ದಂಡಿಗೇನಹಳ್ಳಿ, ರಾಜಗೊಂಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.

ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ 3.30ರ ಸುಮಾರಿಗೆ ಏಕಾಏಕಿ ಆರಂಭವಾದ ಮಳೆ ಅರ್ಧ ಗಂಟೆ ಜೋರಾಗಿ ಸುರಿಯಿತು. ರಸ್ತೆ ಹಾಗೂ ಮನೆಗಳ ಮುಂದೆ ಬೀಳುತ್ತಿದ್ದ ಆಲಿಕಲ್ಲುಗಳನ್ನು ಮಕ್ಕಳು, ಯುವಕರು ಸಂಗ್ರಹಿಸಿ ಕೈಯಲ್ಲಿ ಹಿಡಿದು ಸಂಭ್ರಮಿಸಿದರು. ವರ್ಷಧಾರೆಯಿಂದಾಗಿ ಭೂಮಿ ತಂಪಾಗಿದ್ದು, ರೈತರು ಖುಷಿ ಪಡುವಂತಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

‘ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಅಂತರ್ಜಲ ತಗ್ಗಿದ್ದು, ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡಿತ್ತು. ಸೋಮವಾರ ಸುರಿದ ಮಳೆಯಿಂದಾಗಿ ತೋಟದ ಬೆಳೆಗಳಿಗೆ ಅನುಕೂಲವಾಗಿದೆ. ಇನ್ನೂ ಕೆಲ ದಿನಗಳವರೆಗೆ ತೋಟಗಳಿಗೆ ಕೊಳವೆಬಾವಿ ನೀರು ಹಾಯಿಸದೇ ಇದ್ದರೂ ಏನೂ ತೊಂದರೆಯಾಗುವುದಿಲ್ಲ’ ಎಂದು ಗಂಡುಗನಹಂಕಲು ಗ್ರಾಮದ ರೈತರಾದ ಲೋಕ್ಯಾನಾಯ್ಕ, ಹನುಮಂತನಾಯ್ಕ, ಬಸವರಾಜಗೌಡ ಹಾಗೂ ನಾಗಾ(ವಡ್ಡಾ) ಹೇಳಿದರು.

ಚನ್ನಗಿರಿ ಪಟ್ಟಣದಲ್ಲಿ ತುಂತುರು ಮಳೆ ಬಿದ್ದಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-43-2074683590

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.