ಶನಿವಾರ, ಜನವರಿ 28, 2023
20 °C
‘ಪುನೀತ್‌ ರಾಜಕುಮಾರ್ ಕಪ್’ ರಾಜ್ಯ ಮಟ್ಟದ ಮುಕ್ತ ಚದುರಂಗ ಸ್ಪರ್ಧೆ

ಶಿವಮೊಗ್ಗದ ಎಂ.ಡಿ. ಚಿರಂತ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪುನೀತ್ ರಾಜಕುಮಾರ್ ಸ್ಮರಣಾರ್ಥ ನಗರದಲ್ಲಿ ನಡೆದ ‘ಪುನೀ‌ತ್ ರಾಜಕುಮಾರ್ ಕಪ್’ ರಾಜ್ಯಮಟ್ಟದ ಮುಕ್ತ ಚದುರಂಗ ಟೂರ್ನಿಯಲ್ಲಿ ಶಿವಮೊಗ್ಗದ ಎಂ.ಡಿ. ಚಿರಂತ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

9 ಸುತ್ತುಗಳಲ್ಲಿ 8.5 ಪಾಯಿಂಟ್‍ಗಳನ್ನು ಗಳಿಸುವ ಮೂಲಕ ಪುನೀತ್‌ ರಾಜ್‍ಕುಮಾರ್ ಕಪ್ ಜೊತೆಗೆ ₹15,000 ನಗದು ಬಹುಮಾನವನ್ನು ಪಡೆದರು.

ಶಿವಮೊಗ್ಗದ ಅಜಯ್ ಎಸ್.ಎಂ.ರನ್ನರ್ ಅಪ್‌ ಆಗಿ ₹10,000, ಮೈಸೂರಿನ ಅಜಿತ್ ಎಂ.ಪಿ. ತೃತೀಯ ಸ್ಥಾನ ಪಡೆದು ₹5,000 ನಗದು ಬಹುಮಾನ ಪಡೆದುಕೊಂಡರು. ಶಿರಸಿಯ ನವೀನ ಎಸ್. ಹೆಗಡೆ 4 ಹಾಗೂ ಶಿವಮೊಗ್ಗದ ಅರವಿಂದ ಬಿ.ಆರ್. 5ನೇ ಸ್ಥಾನ ಕ್ರಮವಾಗಿ ₹4,000 ಹಾಗೂ ₹3,000 ನಗದು ಬಹುಮಾನ ಮುಡಿಗೇರಿಸಿಕೊಂಡರು.

7 ವರ್ಷ ಒಳಗಿನ ಬಾಲಕರ ವಿಭಾಗ: ದಾವಣಗೆರೆಯ ಲಿಂಶಾನ್ ಕರಿಗೌಡರ್ (ಪ್ರಥಮ), ಭವಿನ್ ವಿ. ಗೌಡ (ದ್ವಿತೀಯ), ಬಾಲಕಿಯರ ವಿಭಾಗ: ತ್ರಿಶಿಕಾಗೌಡ ಬಿ.ವೈ. (ಪ್ರಥಮ), ಕೆ. ಲೋಚನಾ ರಾಯಣ್ಣ (ದ್ವಿತೀಯ).

9 ವರ್ಷ ಒಳಗಿನ ಬಾಲಕರ ವಿಭಾಗ: ಅದ್ವೈಕ್ ಎಂ.ಎಸ್. (ಪ್ರಥಮ), ನೀನಾದ ಸಿ. ಮೂರ್ತಿ (ದ್ವಿತೀಯ).

ಬಾಲಕಿಯರ ವಿಭಾಗ: ಪುಣ್ಯಗೌಡ ಬಿ.ವೈ. (ಪ್ರಥಮ), ಜಾನ್ವಿ ಮಲ್ಯ (ದ್ವಿತೀಯ).

11 ವರ್ಷದೊಳಗಿನ ಬಾಲಕರ ವಿಭಾಗ: ದಾವಣಗೆರೆಯ ಜೀವನ್‍ಗೌಡ ಎಸ್.ಡಿ. (ಪ್ರಥಮ), ದೇವದತ್ತ ಆರ್. ಕೊಟ್ವಾಲ್ (ದ್ವಿತೀಯ).

ಬಾಲಕಿಯರ ವಿಭಾಗ: ದಾವಣಗೆರೆಯ ಸೌಜನ್ಯ ವೈ.ಎಂ.(ಪ್ರಥಮ), ಆದ್ಯ ಎ.ಎಚ್. (ದ್ವಿತೀಯ).

13 ವರ್ಷ ಒಳಗಿನ ಬಾಲಕರ ವಿಭಾಗ: ಶಿವಮೊಗ್ಗದ ವಿಲಾಸ್ ಆಂಡ್ರೈ (ಪ್ರಥಮ), ದಾವಣಗೆರೆಯ ನಿಶ್ಚಲ್ ಜಿ.ಎಸ್. (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ದಾವಣಗೆರೆಯ ಕಾವ್ಯ ಪ್ರಥಮ ಸ್ಥಾನ ಪಡೆದರು.

15 ವರ್ಷ ಒಳಗಿನ ಬಾಲಕರ ವಿಭಾಗ: ಹರಿಹರದ ಸ್ವಯಂ ಎಂ.ಎಸ್. (ಪ್ರಥಮ), ಹಾವೇರಿಯ ಶ್ರೀಶಾಂತ್ ಗಿಣಿಗೇರ್ (ದ್ವಿತೀಯ) ಬಾಲಕಿಯರ ವಿಭಾಗದಲ್ಲಿ ದಾವಣಗೆರೆಯ ಗೌರಮ್ಮ ಪ್ರಥ ಸ್ಥಾನ ಪಡೆದರು.

18 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ದಾವಣಗೆರೆಯ ಸೃಷ್ಟಿ ಎನ್. (ಪ್ರಥಮ), ಮಾನಸ ಎನ್. (ದ್ವಿತೀಯ), ಲಲಿತಮ್ಮ ಜಿ.ಆರ್. (ತೃತೀಯ).

50 ವರ್ಷ ಮೇಲ್ಪಟ್ಟ ಹಿರಿಯರ ವಿಭಾಗ: ಮೈಸೂರಿನ ಕೃಷ್ಣಮೂರ್ತಿ (ಪ್ರಥಮ), ದಾವಣಗೆರೆಯ ಮಂಜುನಾಥ್ ಪ್ರಸಾದ್ (ದ್ವಿತೀಯ), ವೈ.ಎಂ. ಮಲ್ಲಿಕಾರ್ಜುನ್ (ತೃತೀಯ).

ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್, ಸದಸ್ಯರಾದ ಎ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಹುಲ್ಲುಮನೆ ಗಣೇಶ್, ಮೇಘರಾಜ್, ಗಂಗಾಧರ್, ಸತೀಶ್, ಮಲ್ಲಿ, ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಟಿ. ಯುವರಾಜ್, ಮಂಜುಳಾ ಯುವರಾಜ್, ತರುಣ್ ವೈ., ಕರಿಬಸಪ್ಪ, ರುದ್ರಮುನಿ, ಅಶೋಕ್ ಎನ್., ಅನಿತಾ ಅಣ್ಣಿಗೇರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು