ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪರೀಕ್ಷೆಗೆ ಕೋಚಿಂಗ್ ಸೆಂಟರ್‌: ಕುಲಪತಿ ಪ್ರೊ.ಎಸ್‌.ವಿ. ಹಲಸೆ ಭರವಸೆ

ದಾವಣಗೆರೆ ವಿಶ್ವವಿದ್ಯಾಲಯ
Last Updated 17 ಮೇ 2019, 13:00 IST
ಅಕ್ಷರ ಗಾತ್ರ

ದಾವಣಗೆರೆ: ದೃಶ್ಯಕಲಾ ವಿದ್ಯಾಲಯದಲ್ಲಿ ಅನಿಮೇಷನ್‌, ಮಲ್ಟಿಮೀಡಿಯಾ, ಫೋಟೊಗ್ರಫಿ ಕೋರ್ಸ್‌ಗಳ ಜೊತೆಗೆ ಹಾಗೂ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ತರಬೇತಿ ಕೇಂದ್ರವನ್ನು ಪ್ರಸಕ್ತ ವರ್ಷದಿಂದ ಆರಂಭ ಮಾಡಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿ. ಹಲಸೆ ಹೇಳಿದರು.

ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಚಿತ್ರೋತ್ಸವ –2019 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೋರ್ಸ್ ಆರಂಭಕ್ಕೆ ಈಗಾಗಲೇ ಅಧಿಸೂಚನೆಯಾಗಿದ್ದು, ಶೀಘ್ರದಲ್ಲೇ ಆರಂಭಿಸಲಾಗುವುದು. ಫೋಟೊಗ್ರಫಿ ಕೋರ್ಸ್‌ ಜೊತೆಗೆ ಹಾಗೂ ಪ್ರದರ್ಶನ ಕಲೆಯಲ್ಲಿ, ಸರ್ಟಿಫಿಕೇಟ್‌, ಡಿಪ್ಲೊಮಾ ಕೋರ್ಸ್‌ ಆರಂಭಿಸಲಾಗುವುದು. ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸಂಜೆಯ ವೇಳೆ ತರಬೇತಿ ನೀಡಲು ಅನುಕೂಲ ಮಾಡಿಕೊಡಲಾಗುವುದು. ಇದು ಆರಂಭವಾದರೆ ಮಧ್ಯ ಕರ್ನಾಟಕ ಭಾಗದ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಹೊಸ ನೇಮಕಾತಿಯ ನಂತರ ಜೂನ್‌ ಇಲ್ಲವೇ ಡಿಸೆಂಬರ್‌ ವೇಳೆಗೆ ಆರಂಭಿಸಲಾಗುವುದು’ ಎಂದು ಹೇಳಿದರು.

‘ದೃಶ್ಯಕಲಾ ವಿದ್ಯಾಲಯ ರಾಜ್ಯದಲ್ಲೇ ಅತಿ ಹಳೆಯ ಕಾಲೇಜು ಆಗಿದ್ದು, ಇದಕ್ಕೆ ಬೇಕಾಗುವ ಸೌಲಭ್ಯವನ್ನು ಕಲ್ಪಿಸಲಾಗುವುದು, ಚಿತ್ರಕಲಾ ಗ್ಯಾಲರಿ ಹಾಗೂ ಹುಡುಗರ ಹಾಸ್ಟೆಲ್‌ ಈಗಾಗಲೇ ಆರಂಭವಾಗಿದ್ದು, ಹುಡುಗಿಯರ ಹಾಸ್ಟೆಲ್‌ ಅನ್ನು ಶೀಘ್ರದಲ್ಲೇ ಆರಂಭಿಸಲಾಗುವುದು’ ಕಾರ್ಯಕ್ರಮಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಸಂಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತೆ ಮಾಡಲು ವಿದ್ಯಾಲಯದ ಪ್ರಾಂಶುಪಾಲರು ಯಾವ ಸೌಲಭ್ಯ ಬೇಕು ಅದನ್ನು ಹೇಳಿದರೆ ಖಂಡಿತ ಒದಗಿಸಿಕೊಡುತ್ತೇನೆ. ಸೌಲಭ್ಯ ಕೊಡಲು ಆಸಕ್ತಿ ಇದೆ. ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ಗುಲಬರ್ಗಾ ವಿಶ್ವವಿದ್ಯಾಲಯ ಅಭಿವೃದ್ಧಿಯಾಗಿದ್ದು, ಅಲ್ಲಿನ ಅಧ್ಯಾಪಕರ ಸಹಾಯ ಮಹಾವಿದ್ಯಾಲಯವನ್ನು ಪಡೆದು ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯಕ್ಕೆ 17 ಪ್ರಾದ್ಯಾಪಕರ ಹುದ್ದೆಗಳ ನೇಮಕ ಮಾಡಬೇಕು ಎಂದು 4 ತಿಂಗಳ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವರ್ಷದೊಳಗೆ ನೇಮಕಾತಿ ಆಗುವ ನಿರೀಕ್ಷೆ ಇದೆ. ವಿಶ್ವವಿದ್ಯಾಲಯದ ಕ್ಯಾಂಪ್‌ಸ್‌ಗೆ 125 ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಆಕರ್ಷಿಸಲು ಇಲ್ಲಿ ಕಡಿಮೆ ಅವಧಿಯ ಕೋರ್ಸ್‌ಗಳನ್ನು ಆರಂಭಿಸಿ, ಸಂಸ್ಥೆಯನ್ನು ಉನ್ನತಮಟ್ಟಕ್ಕೆ ಬೆಳೆಯುವಂತೆ ಮಾಡಲು ಇಲ್ಲಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕರು ಕೆಲಸದಲ್ಲಿ ಬದ್ಧತೆ ತೋರಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT