ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣೆಗೆರೆಯಲ್ಲಿ ಮುಂದುವರಿದ ವರ್ಷಧಾರೆ

ಬುಧವಾರದ ಗಾಳಿ – ಮಳೆಗೆ ಮೆಕ್ಕೆಜೋಳ, ಬಾಳೆಗೆ ಹಾನಿ
Last Updated 9 ಆಗಸ್ಟ್ 2020, 7:02 IST
ಅಕ್ಷರ ಗಾತ್ರ

ದಾವಣಗೆರೆ: ಬುಧವಾರ ಗಾಳಿ ಸಹಿತ ಜೋರಾಗಿ ಬಂದಿದ್ದ ಮಳೆ, ಗುರುವಾರ ಗಾಳಿಯ ಅಬ್ಬರವಿಲ್ಲದೇ ತಣ್ಣಗೆ ಸುರಿದಿದೆ. ಬುಧವಾರದ ಮಳೆಗೆ ಮೆಕ್ಕೆಜೋಳ, ಬಾಳೆ ಇತರ ಬೆಳೆಗಳಿಗೆ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹ 10 ಸಾವಿರ ನಷ್ಟ ಉಂಟಾಗಿದೆ. ಸುಮಾರು 100 ಎಕರೆ ಮೆಕ್ಕೆಜೋಳ, 9 ಎಕರೆ 26 ಗುಂಟೆ ಬಾಳೆ ನೆಲಕಚ್ಚಿವೆ. ₹ 12 ಲಕ್ಷ ನಷ್ಟ ಎಂದು ಅಂದಾಜಿಸಲಾಗಿದೆ.

ಹೊನ್ನಾಳಿ ತಾಲ್ಲೂಕಿನಲ್ಲಿ ಒಂದು ಮನೆಗೆ ಹಾನಿಯಾಗಿದ್ದು, ₹ 40 ಸಾವಿರ ನಷ್ಟವಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದೆ. ₹ 1. 35 ಲಕ್ಷ ನಷ್ಟ ಉಂಟಾಗಿದೆ. ಈ ಎಲ್ಲ ಸಂತ್ರಸ್ತರಿಗೆ ಸರ್ಕಾರದ ಮಾರ್ಗಸೂಚಿಯ ಅನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದುಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 12 ಮಿ.ಮೀ., ದಾವಣಗೆರೆಯಲ್ಲಿ 5 ಮಿ.ಮೀ., ಹರಿಹರದಲ್ಲಿ 6 ಮಿ.ಮೀ., ಹೊನ್ನಾಳಿಯಲ್ಲಿ 8 ಮಿ.ಮೀ., ನ್ಯಾಮತಿಯಲ್ಲಿ 2 ಮಿ.ಮೀ. ಹಾಗೂ ಬರಪೀಡಿತ ಎಂದು ಘೋಷಿಸಲಾದ ಜಗಳೂರು ತಾಲ್ಲೂಕಿನಲ್ಲಿ 10 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT