ಭಾನುವಾರ, ಆಗಸ್ಟ್ 14, 2022
28 °C

ಕೊರೊನಾ: 10 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 10 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ.

ದಾವಣಗೆರೆ ತಾಲ್ಲೂಕಿನ ಅಣಬೇರಿನ 56 ವರ್ಷದ ಮಹಿಳೆ, ಕೊಳೆನಹಳ್ಳಿಯ 38 ವರ್ಷದ ಪುರುಷ, ದೊಡ್ಡಬಾತಿಯ 62 ವರ್ಷದ ವೃದ್ಧ, ನೇರ್ಲಿಗೆಯ 47 ವರ್ಷದ ಮಹಿಳೆ, ಆಲೂರಿನ 60ರ ವೃದ್ಧ, ಆನಗೋಡನಹಳ್ಳಿಯ 60ರ ವೃದ್ಧೆ, ಗೋಪನಾಳ್‌ ಗ್ರಾಮದ 30ರ ಮಹಿಳೆ, ದಾವಣಗೆರೆಯ ಸರಸ್ವತಿ ನಗರದ 81 ವರ್ಷದ ವೃದ್ಧೆ, ಹೊನ್ನಾಳಿ ತಾಲ್ಲೂಕಿನ ರಾಂಪುರದ 58 ವರ್ಷದ ಪುರುಷ, ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರಿನ 60 ವರ್ಷದ ವೃದ್ಧೆ ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 93, ಹರಿಹರ ತಾಲ್ಲೂಕಿನಲ್ಲಿ 13, ಚನ್ನಗಿರಿ ತಾಲ್ಲೂಕಿನಲ್ಲಿ 31, ಹೊನ್ನಾಳಿ ತಾಲ್ಲೂಕಿನ 20, ಜಗಳೂರು ತಾಲ್ಲೂಕಿನಲ್ಲಿ 9 ಮಂದಿಗೆ ಕೊರೊನಾ ಬಂದಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 8 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು