ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ತೃತೀಯ ಖರೀದಿ ಸಂಭ್ರಮ ಕಸಿದ ಕೊರೊನಾ

ವ್ಯಾಪಾರಿಗಳಿಗೆ ಶೇ 50ರಷ್ಟು ಆದಾಯ ಕುಸಿತ
Last Updated 26 ಏಪ್ರಿಲ್ 2020, 16:35 IST
ಅಕ್ಷರ ಗಾತ್ರ

ದಾವಣಗೆರೆ: ಅಕ್ಷಯ ತೃತೀಯ ದಿವಸ ಎಂದರೆ ಚಿನ್ನ ಖರೀದಿ ಕೊಳ್ಳುವ ದಿನ ಎಂದೇ ಪ್ರಸಿದ್ಧಿ. ಆದರೆ ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಭರಣಗಳು ಮುಚ್ಚಿದ್ದು, ಈ ವರ್ಷ ಖರೀದಿಸುವ ಅವಕಾಶ ಇಲ್ಲದಂತಾಂಗಿದೆ.

ಅಕ್ಷಯ ತೃತೀಯ ದಿವಸ ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಹಳಷ್ಟು ಜನರು ನೂಕು ನುಗ್ಗಲಿನಲ್ಲಿ ಖರೀದಿ ಮಾಡುತ್ತಿದ್ದರು. ಆದರೆ, ಕೊರೊನಾ ವೈರಸ್‌ ಈ ಸಂಭ್ರಮವನ್ನು ಕಸಿದುಕೊಂಡಿದೆ. ಆದರೆ ಬೃಹತ್‌ ಮಳಿಗೆಯವರು ಆನ್‌ಲೈನ್‌ ಮೂಲಕ ಅವಕಾಶ ನೀಡಿದ್ದರೂ ಚಿನ್ನ ಮಾತ್ರ ಈಗ ಸಿಗುವುದಿಲ್ಲ.

ಏಪ್ರಿಲ್‌– ಮೇ ತಿಂಗಳಗಳಲ್ಲಿ ಮದುವೆ ಮುಹೂರ್ತಗಳು ಜಾಸ್ತಿ. ಮದುವೆಗೆ ತಾಳಿ, ಚೈನು, ಉಂಗುರ, ನೆಕ್ಲೆಸ್‌, ಕಿವಿಯೋಲೆ ಸೇರಿ ಹತ್ತು ಹಲವು ಬಂಗಾರದ ಆಭರಣಗಳನ್ನು ಜನರು ಖರೀದಿಸುತ್ತಿದ್ದರು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿನ್ನದ ಖರೀದಿ ಸ್ಥಗಿತಗೊಂಡಿದೆ.

‘ದಾವಣಗೆರೆಯಲ್ಲಿ 500ಕ್ಕೂ ಹೆಚ್ಚು ಆಭರಣ ಮಳಿಗೆಗಳು ಇದ್ದು, ಎಲ್ಲವೂ ಮುಚ್ಚಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದುವೆಗಳು ರದ್ದಾಗಿದ್ದರಿಂದ ಶೇ 50ರಷ್ಟು ವ್ಯಾಪಾರ ಕುಸಿದಿದೆ. ಶೇ 10ರಷ್ಟು ವ್ಯಾಪಾರ ಅಕ್ಷಯ ತೃತೀಯ ದಿವಸ ಆಗುತ್ತಿದ್ದು, ಆದರೆ ಕೊರೊನಾ ಅಕ್ಷಯ ತೃತೀಯ ಸಂಭ್ರಮವನ್ನು ಕಸಿದುಕೊಂಡಿದೆ’ ಎನ್ನುತ್ತಾರೆ ರಾಯ್ಕರ್ ಜುವೆಲ್ಲರ್ಸ್ ಮಾಲೀಕ ವಾಸುದೇವ ರಾಯ್ಕರ್.

ದೊಡ್ಡ ದೊಡ್ಡ ಮಳಿಗೆಗಳು ಆನ್‌ಲೈನ್‌ನಲ್ಲಿ ಖರೀದಿಗೆ ಅವಕಾಶ ನೀಡಿದ್ದು, ಆದರೆ ಖರೀದಿಸಿದ ಚಿನ್ನ ಸಿಗುವುದು. ಲಾಕ್‌ಡೌನ್ ತೆರವುಗೊಳಿಸಿದ ನಂತರವೇ.

ಅಕ್ಷಯ ತೃತೀಯ ಅಂಗವಾಗಿ ಮಲಬಾರ್ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಮನೆಯಲ್ಲಿಯೇ ಕುಳಿತು ಚಿನ್ನವನ್ನು ಖರೀದಿಸಲು ‘ರಕ್ಷಣೆಗಾಗಿ ಭರವಸೆ‘ (ಪ್ರಾಮೀಸ್‌ ಟು ಪ್ರೊಟೆಕ್ಟ್‌) ಅಭಿಯಾನ ಆರಂಭಿಸಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಲ್ಲಿಯೇ ಇರುವ ಕಾರಣ ಅಲ್ಲಿಂದಲೇ ಚಿನ್ನವನ್ನು ಖರೀದಿಸಲು ಅವಕಾಶ ಕಲ್ಪಿಸಿತ್ತು. ಅಲ್ಲದೇ ಚಿನ್ನ ಖರೀದಿಸುವ ಗ್ರಾಹಕರಿಗೆ ಚಿನ್ನಾಭರಣಗಳ ಮೇಕಿಂಗ್‌ ಜಾರ್ಜ್‌ನಲ್ಲಿ ಶೇ 30ರಷ್ಟು ಕಡಿತ, ವಜ್ರದ ಆಭರಣಗಳ ಮೇಲೆ ಶೇ 20ರವರೆಗೂ ಕಡಿತಗೊಳಿಸಿತ್ತು.

‘ಆನ್‌ಲೈನ್‌ನಲ್ಲಿ ವ್ಯಾಪಾರ ಪರ್ವಾಗಿಲ್ಲ. ಆಭರಣಗಳನ್ನು ಖರೀದಿಸಲು ಅಷ್ಟೊಂದು ಉತ್ಸಾಹ ತೋರಿಲ್ಲ. ಆನ್‌ಲೈನ್‌ನಲ್ಲಿ ಖರೀದಿಸಿದ ಗ್ರಾಹಕರಿಗೆ ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಒಂದು ತಿಂಗಳವರೆಗೂ ಆಭರಣವನ್ನು ಪಡೆಯಬಹುದು’ ಎಂದು ಮಲಬಾರ್ ಗೋಲ್ಡ್ ಪ್ರತಿನಿಧಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT