ಬುಧವಾರ, ಆಗಸ್ಟ್ 4, 2021
27 °C

ವೃದ್ಧ ದಂಪತಿ ಸೇರು ಏಳು ಮಂದಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವೃದ್ಧ ದಂಪತಿ, ಒಬ್ಬರು ವೃದ್ಧೆ ಸೇರಿ ಏಳು ಮಂದಿಗೆ ಕೊರೊನ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಬೆಳಗಾವಿಯಿಂದ ಬಂದಿರುವ ದಾವಣಗೆರೆ ಎಸ್‌ಕೆ ಬಡಾವಣೆಯ 22 ವರ್ಷದ ಯುವಕ (ಪಿ.19801) ಹಾಗೂ ದೆಹಲಿಯಿಂದ ಹಿಂತಿರುಗಿರುವ ದಾವಣಗೆರೆ 23 ವರ್ಷದ ಯುವಕನಿಗೆ (ಪಿ.19802) ಸೋಂಕು ಇರುವುದು ಪತ್ತೆಯಾಗಿದೆ.

ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆಯ 23 ವರ್ಷದ ಯುವಕನ (ಪಿ.10385) ಸಂಪರ್ಕದಿಂದ 23 ವರ್ಷದ ಯುವತಿಗೆ (19803) ವೈರಸ್‌ ಬಂದಿದೆ.

ಎಂಸಿಸಿ ಎ ಬ್ಲಾಕ್‌ನ ಶೀತಜ್ವರ ಇದ್ದ 73 ವರ್ಷದ ವೃದ್ಧರಿಗೆ (ಪಿ.19804) ಕೊರೊನಾ ಪತ್ತೆಯಾಗಿದೆ. ಅವರ ಪತ್ನಿ 63 ವರ್ಷದ ವೃದ್ಧೆಗೆ (ಪಿ.19805) ಕೂಡಾ ಕೊರೊನಾ ಸೋಂಕು ತಗುಲಿದೆ. ಯಾರ ಸಂಪರ್ಕದಿಂದ ಕೊರೊನಾ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಹರಿಹರ ಇಂದಿರಾನಗರದ ಕಂಟೈನ್‌ಮೆಂಟ್‌ ವಲಯದ ಸಂಪರ್ಕದಿಂದ 22 ವರ್ಷದ ಮಹಿಳೆಗೆ (ಪಿ. 19806) ಕೊರೊನಾ ಇರುವುದು ದೃಢಪಟ್ಟಿದೆ. ಚನ್ನಗಿರಿ ಮಠದ ರಸ್ತೆಯಲ್ಲಿ ರ‍್ಯಾಂಡಮ್‌ ಆಗಿ ಪರೀಕ್ಷೆ ನಡೆಸಿದಾಗ 60 ವರ್ಷದ ವೃದ್ಧೆಗೆ (ಪಿ. 19807) ಸೋಂಕು ಇರುವುದು ಪತ್ತೆಯಾಗಿದೆ. ಈ ಇಬ್ಬರಿಗೆ ಯಾರ ಸಂಪರ್ಕ ಎಂಬುದು ಇನ್ನೂ ಗೊತ್ತಾಗಿಲ್ಲ.

ಜಿಲ್ಲೆಯಲ್ಲಿ ಈವರೆಗೆ 345 ಮಂದಿಗೆ ಸೋಂಕು ಬಂದಿದ್ದು, ಅದರಲ್ಲಿ ಶನಿವಾರ ಬಿಡುಗಡೆಯಾದ 9 ಮಂದಿ ಸೇರಿ ಒಟ್ಟು 294 ಮಂದಿ ಗುಣಮುಖರಾಗಿದ್ದಾರೆ. 9 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ 42 ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು