ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಮೇಯರ್‌ ಬಿ.ಜಿ.ಅಜಯ್‌ಕುಮಾರ್‌ಗೆ ಕೊರೊನಾ ಪಾಸಿಟಿವ್‌

ಇದು ದೊಡ್ಡ ಕಾಯಲೆಯಲ್ಲ: ಅಜಯ್‌ಕುಮಾರ್‌
Last Updated 25 ಜುಲೈ 2020, 12:28 IST
ಅಕ್ಷರ ಗಾತ್ರ

ದಾವಣಗೆರೆ: ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ಗೆ ಕೊರೊನಾ ಸೋಂಕು ತಗಲಿದೆ ಎಂದು ಅವರೇ ಖಚಿತಪಡಿಸಿದ್ದಾರೆ.

‘ಸ್ವಲ್ಪ ಕೆಮ್ಮು, ನೆಗಡಿ, ಮೈಕೈ ನೋವು ಇದ್ದಿದ್ದರಿಂದ ಸ್ವಯಂ ಕ್ವಾರಂಟೈನ್‌ನಲ್ಲಿದ್ದೆ. ಬಳಿಕ ಮನೆಯ ಎಲ್ಲ ಸದಸ್ಯರು ಸೇರಿ ಪರೀಕ್ಷೆ ಮಾಡಿಸಿದೆವು. ಪತ್ನಿ ಮಂಗಳಾ, ಮಗ ಭರತ್‌ಗೆ ಪಾಸಿಟಿವ್‌ ಬಂದಿದೆ. ಮಗಳು ನೇಹಾಳಿಗೆ ನೆಗೆಟಿವ್‌ ಎಂದು ವರದಿ ಬಂದಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ದೊಡ್ಡ ಕಾಯಿಲೆಯಲ್ಲ. ಶೀತ, ನೆಗಡಿ, ಕೆಮ್ಮಿನಂತೆ ಸಣ್ಣ ಕಾಯಿಲೆ. ಇದರ ಬಗ್ಗೆ ಜನ ಭೀತರಾಗಬೇಕಿಲ್ಲ. ಆದರೆ ಎಚ್ಚರದಿಂದ ಇರಬೇಕು. ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್‌ ಹಾಕಬೇಕು, ಸ್ಯಾನಿಟೈಜ್‌ ಮಾಡಿಕೊಳ್ಳಬೇಕು. ಅನಗತ್ಯವಾಗಿ ತಿರುಗಾಡಬಾರದು ಎಂದು ಸಲಹೆ ನೀಡಿದ್ದಾರೆ.

‘ನಾನು ಮೇಯರ್‌. ಹಾಗಾಗಿ ಒಬ್ಬ ಜನಪ್ರತಿನಿಧಿಯಾಗಿ ಎಲ್ಲ 45 ವಾರ್ಡ್‌ಗಳಿಗೆ ನಾನು ಹೋಗಲೇ ಬೇಕಾಗುತ್ತದೆ. ಬಹಳಷ್ಟು ಎಚ್ಚರವಹಿಸಿದ್ದೇನೆ. ಆದರೂ ಕೊರೊನಾ ಸೋಂಕು ಬಂದಿದೆ. ಆದ್ದರಿಂದ ಜನರು ಇನ್ನೂ ಹೆಚ್ಚಿನ ಎಚ್ಚರವಹಿಸಬೇಕು ಎಂದರು.

ಪಾಲಿಕೆಯಲ್ಲಿ ಹುಟ್ಟಿದ ಹಬ್ಬ ಆಚರಿಸಿರುವುದು ಹಿಂದೆ ವಿವಾದಕ್ಕೆ ಒಳಗಾಗಿತ್ತು. ‘ನಾನು ಎಂದಿನಂತೆ ಪಾಲಿಕೆಗೆ ಬಂದಾಗ ಸದಸ್ಯರು ಹುಟ್ಟಿದ ದಿನಕ್ಕೆ ಅಭಿನಂದಿಸಿದ್ದರು. ನಾನು ಆಚರಿಸಿಕೊಂಡಿರಲಿಲ್ಲ. ಅದು ನಡೆದು 25 ದಿನಗಳಾಗಿವೆ. ಅದಕ್ಕೂ ಕೊರೊನಾಕ್ಕೂ ಸಂಬಂಧ ಕಲ್ಪಿಸಬಾರದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT