ಸೋಮವಾರ, ಜೂನ್ 14, 2021
24 °C

ದಾವಣಗೆರೆ | ಕೊರೊನಾ ಸೋಂಕು: ಹೆಡ್‌ಕಾನ್‌ಸ್ಟೆಬಲ್‌ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಎಆರ್‌ ಹೆಡ್‌ ಕಾನ್‌ಸ್ಟೆಬಲ್‌ ಶಿವರಾಜ್

ಮಲೇಬೆನ್ನೂರು: ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಪಟ್ಟಣದ ಡಿಎಆರ್‌ ಹೆಡ್‌ ಕಾನ್‌ಸ್ಟೆಬಲ್‌ ಶಿವರಾಜ್ (42) ಗುರುವಾರ ಮೃತಪಟ್ಟಿದ್ದಾರೆ.

ಆ.6ರಂದು ಗಂಟಲು ದ್ರವ ಮಾದರಿ ನೀಡಿದ್ದರು. ಕೊರೊನಾ ಇರುವುದು ಮೂರು ದಿನಗಳ ಹಿಂದೆ ಖಚಿತವಾಗಿತ್ತು. ಚಿಕಿತ್ಸೆಗಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಮೊದಲ ಪೊಲೀಸ್‌ ಇವರು. ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಪೊಲೀಸ್‌ ಒಬ್ಬರು ಮೃತಪಟ್ಟಿದ್ದರು.

ಸಮೀಪದ ಹಾಲಿವಾಣ ಗ್ರಾಮದ 85 ವರ್ಷದ ವೃದ್ಧೆ, ವಾಸನ ಗ್ರಾಮದ ತಾಲ್ಲೂಕು ಪಂಚಾಯತಿ ಸದಸ್ಯ ಜಿ.ಸಿ. ಬಸವರಾಜ್ ಮೃತಪಟ್ಟಿದ್ದಾರೆ.

ಪೊಲೀಸ್ ಇಲಾಖೆ ಸಹೋದ್ಯೋಗಿಗಳು ಪಿಎಸ್ಐ ವೀರಬಸಪ್ಪ ಕುಸಲಾಪುರ ನೇತೃತ್ವದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು