ಫಲಶ್ರುತಿ ₨ 1 ಕೋಟಿ ವೆಚ್ಚದಲ್ಲಿ ಬೋಕಿಕೆರೆ ರಸ್ತೆ ಡಾಂಬರೀಕರಣ

7

ಫಲಶ್ರುತಿ ₨ 1 ಕೋಟಿ ವೆಚ್ಚದಲ್ಲಿ ಬೋಕಿಕೆರೆ ರಸ್ತೆ ಡಾಂಬರೀಕರಣ

Published:
Updated:
Deccan Herald

ಹೊಸದುರ್ಗ: ತಾಲ್ಲೂಕಿನ ಬೋಕಿಕೆರೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ₨ 1 ಕೋಟಿ ವೆಚ್ಚದಲ್ಲಿ ಬೋಕಿಕೆರೆಯಿಂದ ಕಂಗುವಳ್ಳಿ ವರೆಗಿನ ಸುಮಾರು 10 ಕಿ.ಮೀ ರಸ್ತೆಯನ್ನು ಡಾಂಬರೀಕರಣ ಮಾಡಲಾಗುವುದು. ಈ ರಸ್ತೆ ದುರಸ್ತಿ ಬಗ್ಗೆ ಗ್ರಾಮಸ್ಥರಿಂದ ಸಾಕಷ್ಟು ಬಾರಿ ಮನವಿ ಮಾಡಿದ್ದರು. ತಾಲ್ಲೂಕಿನ ಇನ್ನಿತರ ಕಡೆ ಹಾಳಾಗಿರುವ ರಸ್ತೆ ದುರಸ್ತಿಗೆ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಇನ್ನಿತರ ಸೌಕರ್ಯ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗೂಳಿಹಟ್ಟಿ ಡಿ.ಶೇಖರ್‌ ಭರವಸೆ ನೀಡಿದರು.

ಗುತ್ತಿಗೆದಾರ ರೇವಣ್ಣ, ಬಿಜೆಪಿ ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ್‌, ಸ್ವಾಮಿ, ಬಸವರಾಜು, ದೇವಿಗೆರೆ ಮಲ್ಲಿಕಾರ್ಜುನ್‌, ಮರಿದಿಮ್ಮಪ್ಪ, ಆರ್‌.ತಿಪ್ಪಯ್ಯ ಹಾಗೂ ಬೋಕಿಕೆರೆ ಗ್ರಾಮಸ್ಥರು ಹಾಜರಿದ್ದರು.

‘ಕೆಸರು ಗದ್ದೆಯಾದ ಬೋಕಿಕೆರೆ ರಸ್ತೆ’ ಶೀರ್ಷಿಕೆಯಡಿ ಈಚೆಗೆ ‘ಪ್ರಜಾವಾಣಿ’ಯಲ್ಲಿ ವರದಿಯಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !